ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜ್ ಉಡುಪಿಯವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ದ್ವಿತೀಯ ಬಿ.ಎ.ಎಂ.ಎಸ್ ನ ಐಶ್ವರ್ಯ ಸುಭಾಷ್ ರಾಯ್ಕರ್ ಮತ್ತು ಬೃಂದಾ ಆಚಾರ್ಯರವರು ಭಾಗವಹಿಸಿ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.















ವಿದ್ಯಾರ್ಥಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ರಿಜಿಸ್ಟರ್ ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿಗಳಾದ ಅರ್ಕಿಟೆಕ್ಟ್ ಅಕ್ಷಯ್ ಕೆ ಸಿ, ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಚಿದಾನಂದ, ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ.ಸಿ., ಜೊತೆ ಕಾರ್ಯದರ್ಶಿಗಳಾದ ಕೆ. ವಿ. ಹೇಮನಾಥ, ಕೋಶಾಧಿಕಾರಿಗಳಾದ ಗೌತಮ್ ಗೌಡ, ಕೌನ್ಸಿಲ್ ಮೆಂಬರ್ಸ್ ಗಳಾದ ಜಗದೀಶ್ ಅಡ್ತಲೆ, ಶ್ರೀಮತಿ ಮೀನಾಕ್ಷಿ ಕೆ.ಹೆಚ್., ಧನಂಜಯ ಮದುವೆಗದ್ದೆ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ.ಯವರು ಅಭಿನಂದಿಸಿದ್ದಾರೆ.










