ಐವತ್ತೊಕ್ಲು ಪರಿಶಿಷ್ಟ ಪಂಗಡದ ಮನೆಗೆ ನೆರವಾದ ದ.ಕ. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ

0

ಐವತ್ತೊಕ್ಲು ಗ್ರಾಮದ ಕೊಟ್ರಂಜ ಎಂಬಲ್ಲಿಯ ಪರಿಶಿಷ್ಟ ಪಂಗಡದ ಮನೆಯೊಂದಕ್ಕೆದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮಂಗಳೂರು ಇವರು ನೆರವಾಗಿದ್ದಾರೆ.
ಐವತ್ತೊಕ್ಲು ಗ್ರಾಮದ ಕೊಟ್ರಂಜ ಹೊನ್ನಪ್ಪ ನಾಯ್ಕರ ಮನೆಯ ಪಕ್ಕದಲ್ಲಿ ಪಕ್ಕದ ಜಮೀನಿನವರ ಬೃಹತ್ ಗಾತ್ರದ ಮರವೊಂದು ಬೀಳುವ ಪರಿಸ್ಥಿತಿಯಲ್ಲಿ ಇತ್ತು.

ಇದನ್ನು ತೆರವುಗೊಳಿಸಲು ಹೊನ್ನಪ್ಪ ನಾಯ್ಕರು ಕೇಳಿದಾಗ ಅವರು ತಿರಸ್ಕರಿಸುತ್ತಾರೆ. ಬಳಿಕ ಪಂಜ ಗ್ರಾಮ ಪಂಚಾಯತ್ ನವರಿಗೆ ಮರ ತೆರವುಗೊಳಿಸುವಂತೆ ಮನವಿ ಕೊಟ್ಟಾಗ ಪಂಚಾಯತ್ ನವರು ಮನವಿಗೆ ಹಿಂಬರಹವಾಗಿ ತಾವುಗಳು ಮನೆ ಬಿಟ್ಟು ಗಂಜಿ ಕೇಂದ್ರ ಅಥವಾ ಸಂಬಂಧಿಕರ ಮನೆಗೆ ಹೋಗಿ ಎಂದು ಲಿಖಿತ ಪತ್ರವನ್ನು ಕೊಟ್ಟಿರುತ್ತಾರೆ .ಅರಣ್ಯ ಇಲಾಖೆಗೆ ಪತ್ರ ಬರೆದಾಗಲೂ ಕೂಡ ಯಾವುದೇ ಸ್ಪಂದನೆ ಸಿಗದಾಗ ದ ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಗೆ ಹೊನ್ನಪ್ಪ ನಾಯ್ಕರು ಆ ಅಪಾಯಕಾರಿ ಮರವನ್ನು ತೆಗಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿರುತ್ತಾರೆ.


ಕೂಡಲೇ ಕಾರ್ಯಪ್ರವೃತ್ತರಾದ ಜಿಲ್ಲಾ ಸಮಿತಿ ಜಮೀನ್ದಾರರಲ್ಲಿ ಸೌಹಾರ್ದ ಮಾತುಕತೆ ಮೂಲಕ ಮಾತನಾಡಿ ಅವರಲ್ಲಿ ಪರಿಸ್ಥಿತಿ ಯ ಬಗ್ಗೆ ವಿವರಿಸಿದಾಗ ತೆರವುಗೊಳಿಸಲು ಅನುಮತಿ ಕೊಟ್ಟಿರುತ್ತಾರೆ.ಹಾಗೆಯೇ ಕೂಡಲೇ ಆ ಮರವನ್ನು ತೆರವುಗೊಳಿಸಿ ಹೊನ್ನಪ್ಪ ನಾಯ್ಕರ ಕುಟುಂಬಕ್ಕೆ ಇದ್ದ ಆತಂಕವನ್ನು ನಿವಾರಿಸಿ ಕೊಡುವಲ್ಲಿ ಜಿಲ್ಲಾ ಸಮಿತಿ ಯಶಸ್ವಿಯಾಗಿದೆ.ಈ ಸಂದರ್ಭದಲ್ಲಿ ದ ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷರಾದ ಅಶೋಕ್ ನಾಯ್ಕ ಕೆದಿಲ,ಸಂಘದ ಪದಾಧಿಕಾರಿಗಳು ಮತ್ತು ಮನೆಯ ಸದಸ್ಯರು ಉಪಸ್ಥಿತರಿದ್ದರು.