ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಖರೀದಿಯ ಪ್ರಸ್ತಾಪ
ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಮಾಸಿಕ ಸಭೆಯು ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ ಯವರ ಅಧ್ಯಕ್ಷತೆಯಲ್ಲಿ ಸಂಘದ ಕಟ್ಟಡದಲ್ಲಿ ಜೂ.22 ರಂದು ನಡೆಯಿತು.















ಈ ಸಂದರ್ಭದಲ್ಲಿ ವಾರ್ಷಿಕ ಮಹಾಸಭೆಯ ಅಯ- ವ್ಯಯದ
ಕುರಿತು ಲೆಕ್ಕ ಪತ್ರ ಮಂಡಿಸಲಾಯಿತು. ವಾರ್ಷಿಕ ಮಹಾಸಭೆಯ ಕಾರ್ಯಕ್ರಮದ ಬಗ್ಗೆ ಸಂಘದ ಸದಸ್ಯರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಸಂಘಕ್ಕೆ ಸುಸಜ್ಜಿತ ಸಮುದಾಯ ಭವನ ನಿರ್ಮಿಸುವ ಸಲುವಾಗಿ ನಿವೇಶನ ಖರೀದಿಸುವ ಕುರಿತು ಅಧ್ಯಕ್ಷರು ಪ್ರಸ್ತಾಪಿಸಿದರು.
ಕಟ್ಟಡದ ಮುಂಭಾಗದಲ್ಲಿ ಶಾಶ್ವತ ಶೀಟ್ ಅಳವಡಿಸಿ ಪೆಂಡಾಲ್ ನಿರ್ಮಿಸುವ ಬಗ್ಗೆ ಗೋಪಾಲ ಎಸ್.ನಡುಬೈಲು ಸಲಹೆ ನೀಡಿದರು. ಗ್ಯಾರೇಜ್ ನಲ್ಲಿ ಕೆಲಸ ಮಾಡುವ ಸಮಯದಲ್ಲಿ ಅನಾಹುತಸಂಭವಿಸಿದಂತೆಹೆಚ್ಚಿನಜಾಗರೂಕತೆಯಿಂದಕೆಲಸನಿರ್ವಹಿಸುವಂತಾಗಬೇಕು ಎಂದು ಮಧುಚಂದ್ರ ರವರು ಸಲಹೆ ನೀಡಿದರು.
ಸಂಘದ ಸದಸ್ಯರ ಉಳಿದ ನಾಲ್ಕು ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ವೇದಿಕೆಯಲ್ಲಿ ಅತಿಥಿಯಾಗಿ ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ,ಸಂಘದ ಉಪಾಧ್ಯಕ್ಷ ಧನಂಜಯ ಗುತ್ತಿಗಾರು,ಕಾರ್ಯದರ್ಶಿ ಮಧುಚಂದ್ರ ಪಂಜ, ಕೋಶಾಧಿಕಾರಿ
ದಿನೇಶ್ ಬಾಚೋಡಿ ಉಪಸ್ಥಿತರಿದ್ದರು. ಮಲ್ಲೇಶ್ ಬೆಟ್ಟಂಪಾಡಿ
ಸ್ವಾಗತಿಸಿ, ಕೋಶಾಧಿಕಾರಿ ದಿನೇಶ್ ಬಾಚೋಡಿ ವಂದಿಸಿದರು.
ಸಂಘದಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಮುಕ್ತಾಯಗೊಂಡಿತು.



