ಲಯನ್ಸ್ ಗೆ ಕ್ವಾಲಿಟಿ ಸದಸ್ಯರ ನೇಮಿಸಿ: ಗವರ್ನರ್ ಗೋವರ್ಧನ ಶೆಟ್ಟಿ

ಪ್ರತಿ ಲಯನ್ಸ್ ಕ್ಲಬ್ ನಲ್ಲಿ ಕ್ವಾಲಿಟಿ ಲಯನ್ಸ್ ಗಳ ಸದಸ್ಯರ ನೇಮಕ ಮಾಡಿ. ಸಕಾರತ್ಮಕ ಚಿಂತನೆ ಅತಿ ಅಗತ್ಯವಾಗಿದ್ದು ಅಂತವರನ್ನೇ ಸೇರಿಸಿಕೊಳ್ಳಿ ಎಂದು ಲಯನ್ಸ್ 317 – ಡಿ ರ ಎರಡನೇ ಉಪ ರಾಜ್ಯಪಾಲ ಗೋವರ್ದನ ಶೆಟ್ಟಿ ಹೇಳಿದರು. ಅವರು ಜೂ.21 ರಂದು ಲಯನ್ಸ್ ಕ್ಲಬ್ ಗುತ್ತಿಗಾರು ಇದರ ಪದಗ್ರಹಣ ಹಾಗೂ ಚಾರ್ಟರ್ ನೈಟ್ ಕಾರ್ಯಕ್ರಮ ವನ್ನು ಲಯನ್ಸ್ ಕ್ಲಬ್ ಗುತ್ತಿಗಾರು ಇದ ಸಭಾಭವನದ ಶ್ರೀಮತಿ ತಂಗಮ್ಮ ಮತ್ತು ಶ್ರೀ ಮುಂಡೋಡಿ ಬೆಳ್ಯಪ್ಪ ಗೌಡ ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಪದಗ್ರಹಣ ನಡೆಸಿ ಮಾತನಾಡುತಿದ್ದರು.

ಮನುಷ್ಯ ಚಿಕ್ಕವನಿದ್ದಾಗ ಒಳ್ಳೆಯ ಚಿಂತನೆ ಬೆಳೆಸುವಂತೆ ನೋಡಿಕೊಳ್ಳಿ ಅದು ಮುಂದೆ ಸಮಾಜದ ಬೆಳವಣಿಗೆ ಸಹಕಾರಿಯಾಗಿರುತ್ತದೆ. ಸಮಾಜದಲ್ಲಿ ಹತ್ತು ಹಲವು ವ್ಯಕ್ತಿತ್ವದ ಜನರಿರ ಬಹುದು. ಆದರೆ ನೀವು ನಿಂತ ನೀರಾಗದೆ ಮುಂದುವರಿಯುವ ಕೆಲಸ ನಿಮ್ಮಿಂದಾಗಬೇಕು ಎಂದರಲ್ಲದೆ ಗುತ್ತಿಗಾರು ಲಯನ್ಸ್ ಕ್ಲಬ್ ನ ಪ್ರವೀಣ್ ಮುಂಡೋಡಿ ಅಧ್ಯಕ್ಷರಾಗಿರುವುದು ನನಗೆ ಸಂತೋಷ ಉಂಟುಮಾಡಿದೆ ಎಂದರು.















ಸಭೆಯ ಆರಂಭದಲ್ಲಿ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಗುತ್ತಿಗಾರು ಇದರ ಅಧ್ಯಕ್ಷ ಕುಶಾಲಪ್ಪ ತುಂಬತ್ತಾಜೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಲಯನ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉಪಸ್ಥಿತರಿದ್ದು ಚಾರ್ಟರ್ ನೈಟ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಝೋನ್ ಅಧ್ಯಕ್ಷೆ ರೂಪಶ್ರೀ ರೈ, ಪ್ರಾಂತೀಯ ಅಧ್ಯಕ್ಷ ಗಂಗಾಧರ ರೈ, ಐಪಿಪಿ ಜಯರಾಮ ಕಡ್ಲಾರು, ಸುಪ್ರಿತಾ ಗೋವರ್ದನ್,
ಕಾರ್ಯದರ್ಶಿ ವೆಂಕಪ್ಪ ಕೇನಾಜೆ, ಕೋಶಾಧಿಕಾರಿ ಪುರುಷೋತ್ತಮ ಮಣಿಯಾನ ಮನೆ, ಉಪಸ್ಥಿತರಿದ್ದರು.

ನೂತನ ಅಧ್ಯಕ್ಷ ಪ್ರವೀಣ್ ಮುಂಡೋಡಿ, ಕಾರ್ಯದರ್ಶಿ ಆನಂದ ಅಂಬೆಕಲ್ಲು, ಕೋಶಾಧಿಕಾರಿ ಜಾರ್ಜ್ ನಿರ್ಗಮಿತ ಪದಾಧಿಕಾರಿಗಳಿಂದ ಅಧಿಕಾರ ಸ್ವೀಕರಿಸಿ ಬಳಿಕ ಪ್ರವೀಣ್ ಸಭೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿ ಗೋವರ್ದನ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ ಗೆ, ಸಾಧನೆ ಮಾಡಿದಕ್ಕಾಗಿ ಎಸ್.ಎಸ್.ಎಲ್.ಸಿ ಸಾಧಕ ಶಿಶಿರ ಬಿ ಅವರನ್ನು ಸನ್ಮಾನಿಸಲಾಯಿತು.
ಕ್ಲಬ್ಬಿನ ಸ್ಥಾಪಕ ಸದಸ್ಯರನ್ನು ಅಭಿನಂದಿಸಲಾಯಿತು.

ಮೋಹನ್ ಕೆ. ಅವರು ಗವರ್ನರ್ ಅವರ ಪರಿಚಯ ಓದಿದರು. ವೆಂಕಟ್ರಮಣ ಕೆ.ವಿ ಅವರು ನೂತನ ಪದಾಧಿಕಾರಿಗಳ ಪರಿಚಯ ವಾಚಿಸಿದರು. ಕುಶಾಲಪ್ಪ ತುಂಬತ್ತಾಜೆ ಸ್ವಾಗತಿಸಿ, ಆನಂದ ಅಂಬೆಕಲ್ಲು ವಂದಿಸಿದರು.












