ಕಾಂಗ್ರೆಸ್ ಸರಕಾರದಿಂದ ಬಡವರ ಹೊಟ್ಟೆ ಹೊಡೆಯುವ ಕೆಲಸ ಆಗುತ್ತಿದೆ – ಆರ್.ಕೆ.ಭಟ್
ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಬೆಳ್ಳಾರೆ ಗ್ರಾಮ ಪಂಚಾಯತ್ ಎದುರುಗಡೆ ಬಿಜೆಪಿ ವತಿಯಿಂದ ಪ್ರತಿಭಟನೆಯು ಜೂ.23 ರಂದು ನಡೆಯಿತು.
ಸುಳ್ಯ ಮಂಡಲ ಬಿಜೆಪಿ ಉಪಾಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲುರವರು ಮಾತನಾಡಿ ರಾಜ್ಯ ಸರಕಾರ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಮರಳು,ಕೆಂಪುಕಲ್ಲು ತೆಗೆಯುವುದನ್ನು ನಿಲ್ಲಿಸಿದ್ದಾರೆ.

ಕೆಂಪುಕಲ್ಲನ್ನು ಭೂಮಿಯ ಆಳದಿಂದ ತೆಗೆಯಬೇಕಾಗಿಲ್ಲ.ಇದರಿಂದ ಯಾವುದೇ ತೊಂದರೆ ಇರುವುದಿಲ್ಲ.ಮರಳು ಕೂಡ ಅಷ್ಟೆ.ಕರಾವಳಿ ಭಾಗದಲ್ಲಿ ಹೊಳೆಯಲ್ಲಿ ತನ್ನಿಂದ ತಾನೆ ಬಂದು ನಿಲ್ಲುತ್ತದೆ.ಇದನ್ನು ತೆಗೆಯುವುದರಿಂದಲೂ ಯಾವುದೇ ಸಮಸ್ಯೆಗಳಾಗುವುದಿಲ್ಲ. ಇದನ್ನೆಲ್ಲ ನಿಲ್ಲಿಸಿರುವುದರಿಂದ ಬಡವರಿಗೆ ಇಂದು ಕೆಲಸವಿಲ್ಲದಂತಾಗಿದೆ.
ಸರಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಮತ್ತಷ್ಟು ತೊಂದರೆಗಳಾಗಿವೆ.















ಸರಕಾರದಿಂದ ಬಡವರ ಹೊಟ್ಟೆ ಹೊಡೆಯುವ ಕೆಲಸ ಆಗುತ್ತಿದೆ. ಇದನ್ನೆಲ್ಲ ನಿಲ್ಲಿಸಬೇಕು ಇಲ್ಲವಾದಲ್ಲಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಪನ್ನೆಯವರು ಸ್ವಾಗತಿಸಿ, ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.ಎಲ್ಲಾ ಇಲಾಖೆಗಳಲ್ಲಿ ಭ್ರಷ್ಡಾಚಾರ ತುಂಬಿತುಳುಕುತ್ತಿದೆ.
ಗ್ಯಾರಂಟಿ ಯೋಜನೆಗಳಿಂದ ಸರಕಾರ ಇತರ ಯಾವುದೇ ಯೋಜನೆಗಳ ಅನುದಾನ ಮಂಜೂರು ಮಾಡುತ್ತಿಲ್ಲ.
ವೃದ್ಧಾಪ್ಯ ವೇತನ,ಸಂಧ್ಯಾಸುರಕ್ಷಾ ಹಣ ಸರಿಯಾಗಿ ಪಾವತಿಯಾಗುತ್ತಿಲ್ಲ.ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಮಾಡುತ್ತಿದೆ. ವಸತಿ ಯೋಜನೆಗಳಿಗೆ ಅನುದಾನ ಇಲ್ಲ ಎಂದು ಹೇಳಿದರು. ಬಳಿಕ ರಾಜ್ಯ ಸರಕಾರಕ್ಕೆ ಧಿಕ್ಕಾರ ಹಾಕಲಾಯಿತು.
ನಂತರ ಗ್ರಾಮ ಪಂಚಾಯತ್ ಪಿಡಿಒ ಮುಖಾಂತರ ಮುಖ್ಯಂಮತ್ರಿ,ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್.ರೈ,ಉಪಾಧ್ಯಕ್ಷೆ ವೀಣಾ ಮೂಡಾಯಿತೋಟ, ಸದಸ್ಯರಾದ ಜಯಶ್ರೀ, ಬೆಳ್ಳಾರೆ ಶಕ್ತಿ ಕೇಂದ್ರದ ಪ್ರಮುಖರಾದ ದಿಲೀಪ್ ಗಟ್ಟಿಗಾರು,ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಪ್ರವೀಣ್ ಚಾವಡಿಬಾಗಿಲು, ಸಿ.ಎ.ಬ್ಯಾಂಕ್ ನಿರ್ದೇಶಕರಾದ ಭಾಸ್ಕರ ನೆಟ್ಟಾರು, ಭಾರತಿ ಕೊಚ್ಚಿ, ಮುರಳಿ ತಡಗಜೆ, ಶೈಲೇಶ್ ನೆಟ್ಟಾರು, ರೋಹಿತ್ ಕೊಳಂಬಳ, ವಸಂತ ಭಟ್, ರಾಮಚಂದ್ರ ಭಟ್ ಮುಗುಳಿ, ರಾಧಾಕೃಷ್ಣ ಕುಲಾಲ್, ವೆಂಕಟ್ರಮಣ, ಸಂಜೀವ ಕಲಾಯಿ ಮತ್ತಿತರರು ಉಪಸ್ಥಿತರಿದ್ದರು.










