ಪೆರುವಾಜೆ ಗ್ರಾಮ ಪಂಚಾಯತ್ ಎದುರು ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆಯು ಜೂ.23 ರಂದು ನಡೆಯಿತು.
ಗ್ರಾಮ ಪಂಚಾಯತ್ ಸದಸ್ಯ ಪದ್ಮನಾಭ ಶೆಟ್ಟಿಯವರು ಮಾತನಾಡಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ತೊಂದರೆಯಾಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಸರಕಾರ ಅನುದಾನ ನೀಡುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ ಎಂದು ಹೇಳಿ ಸರಕಾರದ ವಿರುದ್ಧ ಧಿಕ್ಕಾರ ಹಾಕಿದರು.















ಶಿವಸುಬ್ರಹ್ಮಣ್ಯ ಪೆಲತ್ತಡ್ಕ ರವರು ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿದರು. ಬಳಿಕ ಪಂಚಾಯತ್ ಪಿಡಿಒ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಕುಶಾಲಪ್ಪ ಪೆರುವಾಜೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ವಿಜಯ ಆಚಾರ್ಯ ಪೆರುವಾಜೆ,ರಮೇಶ ನಾಯ್ಕ, ಜಗನ್ನಾಥ ರೈ, ರಕ್ಷಿತ್ ಪೆರುವಾಜೆ, ಸಚಿನ್ ರಾವ್, ಬಾಲಕೃಷ್ಣ ಭಟ್, ದಿನೇಶ ಮುಕ್ಕೂರು, ಪ್ರಸಾದ್ ಕುಂಡಡ್ಕ, ಕಿರಣ್ ಮುಕ್ಕೂರು, ಬಿಯಾಳು, ಮಾಧವ ಮುಂಡಾಜೆ, ನವೀನ ಕುಕ್ಕುಮೂಲೆ, ಚಿದಾನಂದ ಪೆರುವಾಜೆ, ಈಶ್ವರ ಭಟ್ ಲಹರಿ, ಉಮೇಶ ಪೆರುವಾಜೆ, ಹರ್ಷಿತ್ ಪೆರುವಾಜೆ, ಹೊನ್ನಪ್ಪ, ಕೃಷ್ಣಪ್ಪ ಮತ್ತಿತರರು ಉಪಸ್ತಿತರಿದ್ದರು.










