ಸುಳ್ಯ ನ.ಪಂ.ಕಚೇರಿ ಎದುರು ಬಿಜೆಪಿ ಪ್ರತಿಭಟನೆ

0

ಜನ ವಿರೋಧಿ ಭ್ರಷ್ಟ ಕಾಂಗ್ರೆಸ್ ಸರಕಾರ ತೊಲಗಲಿ ಎಂದು ಘೋಷಣೆ ಕೂಗಿದ ಕಾರ್ಯಕರ್ತರು

ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾದ್ಯಂತ ಎಲ್ಲಾ ಗ್ರಾಮ ಪಂಚಾಯತ್‌ಗಳ ಎದುರು ಜೂ. 24 ರಂದು ಪ್ರತಿಭಟನೆ ನಡೆಸಿದ್ದು ಇದರ ಅಂಗವಾಗಿ ಸುಳ್ಯ ನಗರ ಪಂಚಾಯತ್ ಕಚೇರಿ ಮುಂಭಾಗ ಸುಳ್ಯ ನಗರದ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ದಿಕ್ಕಾರವನ್ನು ಕೂಗಿ ಪ್ರತಿಭಟನಾ ಸಭೆಯನ್ನು ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಬಿಜೆಪಿ ಮುಖಂಡರುಗಳು ರಾಜ್ಯ ಸರ್ಕಾರದ ವಿರುದ್ಧ ಮಾತನಾಡಿ 94 ಸಿ ಹಕ್ಕು ಪತ್ರಗಳಿಗೆ 9/11 ನೀಡುವುದನ್ನು ತಡೆ ಮಾಡಿರುವುದು. ಬಡವರ ಅನಧಿಕೃತ ಕಟ್ಟಡಗಳಿಗೆ ನೀಡುತ್ತಿದ್ದ 11 ಬಿ ಖಾತೆಯನ್ನು ನೀಡದಂತೆ ಆದೇಶ ಹೊರಡಿಸಿರುವುದು. ಪ್ಲಾಟಿಂಗ್ ಆಗದೇ ಇರುವ ಜಮೀನಿನಲ್ಲಿ ಮನೆ ಕಟ್ಟಿ ಕೊಂಡವರಿಗೆ ಮನೆ ನಂಬ್ರ ನೀಡುವುದನ್ನು ತಡೆ ಹಿಡಿದಿರುವುದು. ಕುಟುಂಬಸ್ಥರು ವಾಸ್ತವವಿದ್ದುಕೊಂಡು ಮನೆ ನಂಬ್ರ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ತಡೆ ಹಿಡಿದಿದೆ ಎಂಬ ಹತ್ತು ಹಲವಾರು ಸಮಸ್ಯಗಳ ಪಟ್ಟಿಯನ್ನು ಆರೋಪಗಳನ್ನು ಪ್ರಸ್ತಾಪಿಸಿ ಮಾತನಾಡಿದರು.

ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಬಿಜೆಪಿ ಮಂಡಲ ಸಮಿತಿ ಪ್ರ. ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಕೆ ಟಿ, ನ ಪಂ ಉಪಾಧ್ಯಕ್ಷ ಬುದ್ಧ ನಾಯ್ಕ್ ರವರು ಮಾತನಾಡಿ ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಆರೋಪಿಸಿ ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ನ ಪಂ ಸದಸ್ಯರುಗಳಾದ ಶಿಲ್ಪಾ ಸುದೇವ್, ಬಾಲಕೃಷ್ಣ ರೈ, ನಾರಾಯಣ ಶಾಂತಿನಗರ, ಶೀಲಾ ಅರುಣ್ ಕುರುಂಜಿ, ಸುಧಾಕರ ಕುರುಂಜಿ ಸುಶೀಲ ಜಿನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಮತಿ ಕಿಶೋರಿ ಶೇಟ್, ಮುಖಂಡರುಗಳಾದ ಸುನಿಲ್ ಕೇರ್ಪಳ, ದಿನೇಶ, ಕಿರಣ್ ಕುರುಂಜಿ, ದಯಾನಂದ ಕೇರ್ಪಳ, ಸೋಮನಾಥ ಪೂಜಾರಿ, ನವೀನ್ ಕುದ್ಪಾಜೆ, ದಯಾನಂದ ಕೇರ್ಪಳ, ಕೇಶವ ಮಾಸ್ತರ್, ಅವಿನಾಶ್ ಕುರುಂಜಿ, ಶಿವನಾಥ ರಾವ್ ಹಳೆಗೇಟು, ಶಿವರಾಮ ಕೇರ್ಪಳ, ಬೂಡು ರಾಧಾಕೃಷ್ಣ ರೈ, ಪ್ರದೀಪ್ ಬೂಡು, ಪ್ರಶಾಂತ್ ಕಾಯರ್ತೋಡಿ, ರಂಜಿತ್ ಕುಮಾರ್, ದಾಮೋದರ ಮಂಚಿ, ನವೀನ್ ಕುದ್ಪಾಜೆ, ದೇವರಾಜ್ ಕುದ್ಪಾಜೆ, ಶ್ರೀಮತಿ ಶ್ವೇತ, ಸುಲೋಚನಾ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ನಾರಾಯಣ ಶಾಂತಿನಗರ ಸ್ವಾಗತಿಸಿ, ನಿರೂಪಿಸಿದರು. ಮುಖಂಡರಾದ ರಾಧಾಕೃಷ್ಣ ಬೂಡು ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬಿ ಜೆ ಪಿ ಸಂಸ್ಥಾಪಕರಾದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.