
ಮದ್ರಸ ಅಧ್ಯಾಪಕ ಒಕ್ಕೂಟ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಸುಳ್ಯ ರೇಂಜ್ ಇದರ ಮುಅಲ್ಲಿಂ ಅಧಿವೇಶನವು ಬುಸ್ತಾನುಲ್ ಉಲೂಂ ಮದ್ರಸ ಜಟ್ಟಪಳ್ಳ ಸಭಾಂಗಣದಲ್ಲಿ ನಡೆಯಿತು.
ರೇಂಜ್ ಅಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ ಅಧ್ಯಕ್ಷತೆ ವಹಿಸಿ ಕೋಶಾಧಿಕಾರಿ ಮುಹಿಯ್ಯದ್ದೀನ್ ಲತೀಫಿ ಪೆರಾಜೆ ಉದ್ಘಾಟಿಸಿದರು.















ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ವರದಿ ವಾಚಿಸಿ,ಲೆಕ್ಕ ಪತ್ರ ಮಂಡಿಸಿದರು.ಹಯಾತುಲ್ ಇಸ್ಲಾಂ ಕಮಿಟಿ ರಿ ಜಟ್ಟಿಪಳ್ಳ ಅಧ್ಯಕ್ಷ ಹಾಜಿ ಮುಹಮ್ಮದ್ ಬಿ ಎಂ ,ಗೌರವಾಧ್ಯಕ್ಷ ಅಬೂಬಕ್ಕರ್ ಕೆ ಎ,ಪ್ರಧಾನ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ,ಮದ್ರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ,ಮಾಜಿ ಅಧ್ಯಕ್ಷ ಮುಹಮ್ಮದ್ ಹಾಜಿ ಎಸ್ ಎ ಎಸ್,ಮೂಸಾ ಜಟ್ಟಿಪಳ್ಳ, ಎಸ್ ಎಂ ಎ ಸುಳ್ಯ ರೀಜ್ಯನಲ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫೈಝಲ್ ಝುಹ್ರಿ,ಹಯಾತುಲ್ ಇಸ್ಲಾಂ ಕಮಿಟಿ ಕಾರ್ಯದರ್ಶಿ ಅಹ್ಮದ್ ಖಬೀರ್ ಜಟ್ಟಿಪಳ್ಳ ಮುಂತಾದವರು ಗೌರವ ಉಪಸ್ಥಿತರಿದ್ದರು.




ಮುಸ್ತಫ ಅದನಿ ಗಾಂಧಿನಗರ ಪ್ರಬಂದ ಮಂಡಿಸಿ,ಸಿರಾಜುದ್ಧೀನ್ ಸಖಾಫಿ ಗಾಂಧಿನಗರ ಮಾದರೀ ತರಗತಿ ನಡೆಸಿದರು.ಸುಲೈಮಾನ್ ಸಅದಿ ಗುತ್ತಿಗಾರು,ಮುಹಮ್ಮದಲಿ ಸಖಾಫಿ ಕುಂಭಕ್ಕೋಡು ನಿರೂಪಣೆಗೈದರು.ಅಶ್ರಫ್ ನಈಮಿ ಇರುವಂಬಳ್ಳ ಪಾಠ ಖಿತಾಬ್ ಅವಲೋಕನಗೈದು,ಸಿರಾಜ್ ಸಅದಿ ಜಟ್ಟಿಪಳ್ಳ ನ್ಯೂಸ್ ರೀಡಿಂಗ್ ಮಾಡಿದರು.ಅಬ್ದುಲ್ ಜಲೀಲ್ ಮುಈನಿ ಜೀರ್ಮುಖಿ ಕ್ವಿಝ್ ಪ್ರೋಗ್ರಾಂ ನಡೆಸಿದರು.ಅಸ್ಸೆಯ್ಯಿದ್ ಹುಸೈನ್ ಪಾಷಾ ತಂಙಳ್ ಅನ್ಸಾರಿಯಾ ಆಲಾಪನೆಗೈದರು.ಸಿರಾಜುದ್ಧೀನ್ ಹಿಮಮಿ ಮೇನಾಲ
ಖಾಝಿ ಖುರ್ರತ್ ಸಾದಾತ್ ಕೂರತ್ ತಂಙಳ್ ರವರ ಅನುಸ್ಮರಣಾ ಪ್ರಭಾಷಣ ನಡೆಸಿದರು.ರೇಂಜ್ ಮೀಡಿಯಾ ಕಾರ್ಯದರ್ಶಿ ಸಾಬಿತ್ ಪಾಳಿಲಿ ಜಾಲ್ಸೂರು ಸಹಕಾರ ದೊಂದಿಗೆ ರೇಂಜ್ ವ್ಯಾಪ್ತಿಯ ಅಧ್ಯಾಪಕರುಗಳಿಗೆ ರೇಂಜ್ ವತಿಯಿಂದ ಐ ಡಿ ಕಾರ್ಡ್ ವಿತರಿಸಲಾಯಿತು.

ಪರಿಷ್ಕೃತ ಪಾಠ ಖಿತಾಬುಗಳ ಪರಿಚಯ ಹಾಗೂ ಅಧ್ಯಾಪಕರುಗಳಿಗೆ ವಿವಿಧ ಟ್ರೈನಿಂಗ್ ಕ್ಯಾಂಪ್ ನಡೆಸಲು ಯೋಜನೆ ರೂಪಿಸಲಾಯಿತು.
ಶಿಹಾಬ್ ಜಟ್ಟಿಪಳ್ಳ,ಮೊಯಿದು,ಅಬ್ದುರ್ರಹ್ಮಾನ್,ಶಿಹಾಬ್ ಮುಂತಾದವರು ಸಹಕರಿಸಿದರು.ಭಾಗವಹಿಸಿದ ಅಧ್ಯಾಪಕರುಗಳನ್ನು ಊರವರ ಸಹಕಾರದಿಂದ ಸತ್ಕರಿಸಲಾಯಿತು ರೇಂಜ್
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಜಟ್ಟಿಪಳ್ಳ ಸ್ವಾಗತಿಸಿ,ಮಿಶನರಿ ಕಾರ್ಯದರ್ಶಿ ಫೈಝಲ್ ಹಿಮಮಿ ಪೈಚಾರು ವಂದಿಸಿದರು.










