ರೋಟರಿ ಕ್ಲಬ್‌ ಬೆಳ್ಳಾರೆ ಟೌನ್‌ಗೆ ಗ್ಲೋಬಲ್‌ ಎಕ್ಸಲೆನ್ಸ್‌ ಪ್ರಶಸ್ತಿ

0
2024-25ನೇ ಸಾಲಿನಲ್ಲಿ ರೋಟರಿ ಕ್ಲಬ್‌ ಬೆಳ್ಳಾರೆ ಟೌನ್‌ ಹಮ್ಮಿಕೊಂಡ ಸಾಮಾಜಿಕ ಕಾರ್ಯಕ್ರಮಗಳು, ಟಿಆರ್‌ಎಫ್‌ ದೇಣಿಗೆ, ಸದಸ್ಯತನ ಅಭಿವೃದ್ಧಿ ಮುಂತಾದವುಗಳನ್ನು ಗುರುತಿಸಿ ರೋಟರಿ ಜಿಲ್ಲೆ 3181ರ ಸಣ್ಣ ಕ್ಲಬ್‌ ವಿಭಾಗದಲ್ಲಿ ಇಂಪ್ಯಾಕ್ಟ್‌ ಎಕ್ಸಲೆನ್ಸ್‌, ಔಟ್‌ರೀಚ್‌ ಎಕ್ಸಲೆನ್ಸ್‌, ಅಡಾಪ್ಟಬಿಲಿಟಿ ಎಕ್ಸಲೆನ್ಸ್‌, ಸಿಗ್ನಿಫಿಕೆಂಟ್‌ ಸರ್ವಿಸ್‌ ಅವಾರ್ಡ್‌ಗಳೊಂದಿಗೆ ಜಿಲ್ಲೆಯ ಅತ್ಯುತ್ತಮ ಕ್ಲಬ್‌ ಪ್ರಶಸ್ತಿ ʻಗ್ಲೋಬಲ್‌ ಕ್ಲಬ್ ಎಕ್ಸಲೆನ್ಸ್‌ ಅವಾರ್ಡ್‌ʼ ದೊರೆತಿದೆ.
ಮಂಗಳೂರು ಪಿಲಿಕುಳ ಸ್ಕೌಟ್‌ ಹಾಗೂ ಗೈಡ್ಸ್‌ ಸಭಾಂಗಣದಲ್ಲಿ ನಡೆದ ಜಿಲ್ಲಾ ಅವಾರ್ಡ್‌ ನೈಟ್‌ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್‌ ವಿಕ್ರಮ್‌ ದತ್ತ ಅವರಿಂದ ಕ್ಲಬ್‌ ಅಧ್ಯಕ್ಷರಾದ ಚಂದ್ರಶೇಖರ ರೈ ಬಜನಿ ಹಾಗೂ ಕಾರ್ಯದರ್ಶಿ ಎ.ಕೆ.ಮಣಿಯಾಣಿ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಹಾಯಕ ಗವರ್ನರ್‌ ವಿನಯಕುಮಾರ್‌, ಪೂರ್ವಾಧ್ಯಕ್ಷರುಗಳಾದ ಶ್ಯಾಮಸುಂದರ್‌ ರೈ, ಕರುಣಾಕರ ಆಳ್ವ, ನವೀನ್‌ಕುಮಾರ್‌ ರೈ, ಪ್ರಮೋದ್‌ಕುಮಾರ್‌ ಶೆಟ್ಟಿ, ರವೀಂದ್ರ ಗೌಡ, ಪ್ರಭಾಕರ ಆಳ್ವ, ಮೋನಪ್ಪ, ಪದ್ಮನಾಭ ಬೀಡು, ಶಶಿಧರ್‌, ಸದಸ್ಯರುಗಳಾದ ವಿಶ್ವನಾಥ ಕೆ., ಪ್ರಸಾದ್‌, ಸತ್ಯನಾರಾಯಣ, ಆರಿಫ್‌, ವೀರನಾಥ, ಬಾಲಕೃಷ್ಣ, ಪ್ರಶಾಂತ್‌ ತಂಟೆಪ್ಪಾಡಿ, ರಹಿಮಾನ್‌, ಮಹಾಬಲ, ಮುಸ್ತಫ, ಅಬ್ದುಲ್‌ ನಝೀರ್‌, ನಟರಾಜ್‌, ಪ್ರಮೋದ್‌ ವೈಪಾಲ ಹರೀಶ್‌ ರೈ ಬಜನಿ, ಅಭಿಲಾಶ್‌ ರೈ ಉಪಸ್ಥಿತರಿದ್ದರು.