
ಸುಳ್ಯ ರೋಟರಿ ಕ್ಲಬ್ ಪ್ರಾಯೋಜಕತ್ವದ ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಆಡಳಿತಕ್ಕೊಳ ಪಟ್ಟ ರೋಟರಿ ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲೆ ಸುಳ್ಯ ದ. ಕ. ಇದರ ವಿದ್ಯಾರ್ಥಿ ಸರಕಾರ ರಚನೆಯ ಚುನಾವಣೆಯನ್ನು ಜೂ. ೨೮ ರಂದು ನಡೆಸಲಾಯಿತು. ಶಾಲಾ ನಾಯಕನಾಗಿ ೬ನೇ ತರಗತಿಯ ಸಂಗಮ್ ಕೆ. ಎಸ್. ಮತ್ತು ಉಪನಾಯಕಿಯಾಗಿ ೫ನೇ ತರಗತಿಯ ಪ್ರಾಪ್ತಿ ಎ. ಆರ್. ಆಯ್ಕೆ ಯಾಗಿರುತ್ತಾರೆ. ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಜ್ಯೋತ್ಸ್ನಾ ಕೆ. ರವರು ವಿದ್ಯಾರ್ಥಿ ಸರಕಾರ ರಚನೆಯ ವಿಧಿ ವಿಧಾನಗಳನ್ನು ಚುನಾವಣೆ ಗೆ ನಿಂತ ಅಭ್ಯರ್ಥಿಗಳಿಗೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಗೀತಾ ಎನ್. ರವರ ಉಸ್ತುವಾರಿಯಲ್ಲಿ ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಸಲಾಯಿತು.



















