ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಕ್ಷೇತ್ರದ ಅಭಿವೃದ್ಧಿ ಮತ್ತು ಊರ ಜನರ ಕ್ಷೇಮಾಭಿವೃದ್ಧಿಗಾಗಿ ವಿಶೇಷ ಪೂಜೆ ಮತ್ತು ಹೋಮಗಳು ಜುಲೈ 3 ರಂದು ನಡೆಯಲಿದೆ.















ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನಾ ಚಿಂತನೆಯಂತೆ ದೋಷ,ಬಾಧೆಗಳ ಪರಿಹಾರಕ್ಕಾಗಿ ಜು.3 ರಂದು ಬೆಳಿಗ್ಗೆಯಿಂದ ಕ್ಷೇತ್ರದಲ್ಲಿ ಪೂಜೆಗಳು, ಅಷ್ಟರೂಢ ಶಿವಪಾರ್ವತಿ ಹೋಮ, ಮೃತ್ಯುಂಜಯ ಹೋಮ ಹಾಗೂ ಸುದರ್ಶನ ಹೋಮ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಊರ ಪರವೂರ ಭಕ್ತಾಧಿಗಳು ಭಾಗವಹಿಸಬೇಕೆಂದು ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.










