ಅರಂತೋಡು-ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಲೆಕ್ಕಿಗ ಸೀತಾರಾಮ ಯು. ನಿವೃತ್ತಿ ಬೀಳ್ಕೊಡುಗೆ ಸಮಾರಂಭ

0


ಅರoತೋಡು-ತೊಡಿಕಾನ ಪ್ರಾ.ಕೃ.ಪ.ಸ.ಸಂಘದಲ್ಲಿ ಸುಮಾರು 26 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಸೀತಾರಾಮ ಉಳುವಾರು-ಶುಂಠಿಯಡ್ಕರವರು ಜೂನ್ 30ರಂದು ಸೇವೆಯಿಂದ ವಯೋನಿವೃತ್ತಿ ಹೊಂದಲಿದ್ದು, ಅವರ ಬೀಳ್ಕೊಡುಗೆ ಸಮಾರಂಭ ಇಂದು ಸಂಘದ ಸಿರಿಸೌಧ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕರು, ಸಮೃಧಿ ಮಾರ್ಟ್ನ ಅಧ್ಯಕ್ಷರಾದ ದಯಾನಂದ ಕುರುಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಸ್ವಾಗತಿಸಿ, ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆರವರು ವಿದಾಯದ ಮಾತುಗಳನ್ನಾಡುತ್ತಾ ಸೀತಾರಾಮ ಯು. ರವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಸೀತಾರಾಮ ಯು. ರೇವತಿ ದಂಪತಿಗಳನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು. ಸಂಘದ ನಿರ್ದೇಶಕರುಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಘದ ಸಿಬ್ಬಂದಿ ನಯನಕುಮಾರ್ ಧನ್ಯವಾದ ಸಮರ್ಪಿಸಿದರು.
ಉಳುವಾರು-ಶುಂಠಿಯಡ್ಕ ಕುಂಞಣ್ಣ ಗೌಡ ಮತ್ತು ಪಾರ್ವತಿ ದಂಪತಿಗಳ ಪ್ರಥಮ ಪುತ್ರನಾದ ಅವರು 01/07/1999 ರಂದು ದಿನ ಕೂಲಿ ನೌಕರನಾಗಿ ಸೇವೆಗೆ ಸೇರಿ ನಂತರ ಕಿರಿಯ ಗುಮಾಸ್ತರಾಗಿ, ಹಿರಿಯ ಗುಮಾಸ್ತರಾಗಿ, ಲೆಕ್ಕಿಗರಾಗಿ ಸೇವೆ ಸಲ್ಲಿಸಿದ್ದರು.