
ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯ ಗಾಂಧಿನಗರ ಕೆ ಪಿ ಎಸ್ ನಲ್ಲಿ ಜು. 1 ರಂದು ಗಿಡ ನೆಡುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಕೆಪಿಎಸ್ ಉಪ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿಲಕ್ಷ್ಮಿ ರವರು ಉದ್ಘಾಟಿಸಿದರು.
ಕೆನರಾ ಬ್ಯಾಂಕ್ ನ ಆಪ್ತ ಸಮಾಲೋಚಕಿ ಅಮೂಲ್ಯ ಸಾಕ್ಷರತಾ ಕೇಂದ್ರದ ಶ್ರೀಮತಿ ಸುಜಾತರವರು ಪ್ರಾಸ್ತವಿಕ ಮಾತನಾಡಿ ‘ಕೆನರಾ ಬ್ಯಾಂಕ್ ೧೯೦೬ರಲ್ಲಿ ಕೆನರಾ ಬ್ಯಾಂಕ್ ಹಿಂದೂ ಶಾಶ್ವತ ನಿಧಿ ಹೆಸರಿನಿಂದ ಮಂಗಳೂರಿನಲ್ಲಿ ಪ್ರಥಮ ವಾಗಿ ಅಮ್ಮೆಂಬಳ ಸುಬ್ಬರಾವ್ ಪೈ ರವರ ನೇತೃತ್ವದಲ್ಲಿ ಮೊದಲು ಸ್ಥಾಪನೆಯಾಯಿತು.ಪ್ರಸ್ತುತ ಸಂಧರ್ಭದಲ್ಲಿ ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕ್ಗಳಲ್ಲಿ ಕೆನರಾ ಬ್ಯಾಂಕ್ ಕೂಡ ಬೆಳೆದು ನಿಂತಿದೆ.
ಸಂಸ್ಥೆಯ ಹೆಸರನ್ನು ಕೆನರಾ ಬ್ಯಾಂಕ್ ಎಂದು ೧೯೧೦ರಲ್ಲಿ ಬದಲಾಯಿಸಲಾಯಿತು.

ಬಳಿಕ ೧೯ ಜುಲೈ, ೧೯೬೯ರಲ್ಲಿ ಬ್ಯಾಂಕ್ ಅನ್ನು ರಾಷ್ಟ್ರೀಕರಿಸಲಾಗಿದೆ.
೨೦೦೫ರ ಇಸವಿಯಂತೆ ಬ್ಯಾಂಕ್ ಸುಮಾರು ೨೫೦೮ ಶಾಖೆಗಳನ್ನು ಹೊಂದಿದ್ದು ಭಾರತವಲ್ಲದೇ ಲಂಡನ್, ಮಾಸ್ಕೋ, ಹಾಂಗ್ಕಾಂಗ್, ದೋಹಾ, ದುಬೈ ಮುಂತಾದ ಸ್ಥಳಗಳಲ್ಲಿಯು ಬ್ಯಾಂಕ್ ತನ್ನ ಶಾಖೆಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.








ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೆನರಾ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ಅಜೀಶ್ ಸ್ಯಾಮುಲ್ ರವರು ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಕೆನರಾ ಬ್ಯಾಂಕ್ ಸಹ ವ್ಯವಸ್ಥಾಪಕರಾದ ಆಗಸ್ಟಿನ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ದಿನದ ಸವಿ ನೆನಪಿಗಾಗಿ ಹಣ್ಣಿನ ಗಿಡಗಳನ್ನು ಶಾಲಾ ಮುಖ್ಯಸ್ಥರಾದ ಶ್ರೀಮತಿ ಜ್ಯೋತಿಲಕ್ಷ್ಮಿ ಅವರಿಗೆ ಬ್ಯಾಂಕ್ ಸಂಸ್ಥೆ ವತಿಯಿಂದ ಹಸ್ತಾಂತರಿಸಲಾಯಿತು.
ಕೈತೋಟದಲ್ಲಿ ಹಣ್ಣಿನ ಗಿಡವನ್ನು ನೆಡುವುದರ ಮೂಲಕ” ಗಿಡ ಬೆಳೆದಂತೆ ವಿದ್ಯಾರ್ಥಿಗಳು ಉಳಿತಾಯ ಖಾತೆಯಲ್ಲಿ ಆರ್ಥಿಕ ಸಂಪತ್ತು ವೃದ್ಧಿಯಾಗಲಿ. ಎಂದು ಗಣ್ಯರು ಹಾರೈಸಿದರು.
ಶ್ರೀಮತಿ ಜ್ಯೋತಿ ಲಕ್ಷ್ಮಿ ಸ್ವಾಗತಿಸಿ ಶಿಕ್ಷಕ ಚಿನ್ನಪ್ಪ ಗೌಡ ಧನ್ಯವಾದ ಸಮರ್ಪಿಸಿದರು.ಶ್ರೀಮತಿ ಯಶ್ವಿನಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.










