















ಸೋಣಂಗೇರಿಯಲ್ಲಿ ಬೈಕ್ ಶಾಲಾ ಕಾಂಪೌಂಡಿಗೆ ಗುದ್ದಿ ಸವಾರನಿಗೆ ಗಂಭೀರ ಗಾಯವಾದ ಘಟನೆ ಜು.5 ರಂದು ನಡೆದಿದೆ.
ಬಾಂಜಿಕೋಡಿಯ ಸಂಪತ್ ಎಂಬವರು ಬೆಳಿಗ್ಗೆ ಬಾಂಜಿಕೋಡಿಯಿಂದ ಸುಳ್ಯ ಕಡೆಗೆ ಬರುತ್ತಿರುವಾಗ ಬಾಂಜಿಕೋಡಿಯಲ್ಲಿ ಸೋಣಂಗೇರಿ ಶಾಲಾ ಕಾಂಪೌಂಡಿಗೆ ಗುದ್ದಿ ಕೈ ಕಾಲಿಗೆ ತೀವ್ರ ತರದ ಗಾಯವಾಗಿದ್ದು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ವಿನ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.
ಇವರು ಸುಳ್ಯ ಗ್ಯಾರೇಜೊಂದರಲ್ಲಿ ಉದ್ಯೋಗಿಯಾಗಿದ್ದಾರೆಂದು ತಿಳಿದುಬಂದಿದೆ.










