
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಕ್ಕೆ ಸುಳ್ಯಕ್ಕೆ ಕೆಪಿಸಿಸಿ ಮುಖಂಡರ ಭೇಟಿ ಹಿನ್ನಲೆ ಸುಳ್ಯ ಸದರ್ನ್ ರೆಸಿಡೆನ್ಸಿ ಬಳಿ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರುಗಳು ಜಮಾಯಿಸಿದ್ದಾರೆ.
















ಕೆ ಪಿ ಸಿ ಸಿ ಮುಖಂಡರುಗಳು ಮತ್ತು ವೀಕ್ಷಕರುಗಳಾದ ವಿ.ಆರ್. ಸುದರ್ಶನ್, ಎಂ. ನಾರಾಯಣ ಸ್ವಾಮಿ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಗೇರು ನಿಗಮದ ಅಧ್ಯಕ್ಷೆ ಮಮತ ಶೆಟ್ಟಿ ಯವರು ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ.

ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಸಂಗ್ರಹಿಸಿ ವರದಿಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಲಿದ್ದಾರೆ. ಮಂಗಳೂರಿನಲ್ಲಿ ವೀಕ್ಷಕರು ಸಭೆ ನಡೆಸಿದ್ದರೂ ಸುಳ್ಯದಲ್ಲಿ ಸಭೆ ನಡೆಸಿ ಅಭಿಪ್ರಾಯ ನಡೆಸಬೇಕು ಎಂಬ ನಿಟ್ಟಿಲ್ಲಿ ಮತ್ತೆ ಕೆಪಿಸಿಸಿ ವೀಕ್ಷಕರ ನೇಮಕ ಮಾಡಲಾಗಿದೆ.










