














ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಮೊಗ್ರ ಘಟ ಸಮಿತಿ ವ್ಯಾಪ್ತಿಯ ಮೊಗ್ರ ಗಡಿಕಲ್ಲು ಎಂಬಲ್ಲಿ ಶಂಖಶ್ರೀ ನೂತನ ಸಂಘದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಮೊಗ್ರ ಘಟ ಸಮಿತಿ ಅಧ್ಯಕ್ಷೆ ಶ್ರೀಮತಿ ಶಾರದ ದೀಪ ಬೆಳಗಿಸಿ ಸಂಘಕ್ಕೆ ಚಾಲನೆ ನೀಡಿದರು. ಗುತ್ತಿಗಾರು ವಲಯದ ಸಂಯೋಜಕಿ ಶ್ರೀಮತಿ ಸವಿತ ಸಂಘದ ಸದಸ್ಯರಿಗೆ ಸಂಘದ ನಿಯಮಗಳ ಬಗ್ಗೆ ಮಾಹಿತಿ ನೀಡಿದ್ದರು. ಈ ಸಂದರ್ಭದಲ್ಲಿ ಮೊಗ್ರ ಘಟ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಶಿಶಿಮಾ ಜಾಕೆ, ಸಂಘಟನಾ ಕಾರ್ಯದರ್ಶಿ ವಾಸುದೇವ, ಸೇವಾದೀಕ್ಷಿತೆ ಶ್ರೀಮತಿ ಭವ್ಯ ಮತ್ತಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾಗಿ ವಿಜಕುಮಾರ್ ಗಡಿಕಲ್ಲು, ಕಾರ್ಯದರ್ಶಿಯಾಗಿ ರವಿಕುಮಾರ್ ಗಡಿಕಲ್ಲು, ಕೋಶಾಧಿಕಾರಿಯಾಗಿ ವಸಂತಕಲಾ ಹಾಗೂ ಸದಸ್ಯರುಗಳಾಗಿ ಕಿರಣ ಗಡಿಕಲ್ಲು, ಶೀನ ಗಡಿಕಲ್ಲು, ಅಶೋಕ ಮುತ್ಲಾಜೆ ಮತ್ತು ನಾಗೇಶ್ ಗಡಿಕಲ್ಲು ಆಯ್ಕೆಯಾದರು.










