ಬೆಳ್ಳಾರೆ ಗ್ರಾಮ ಪಂಚಾಯತ್ ಪ್ರಥಮ ಹಂತದ ಗ್ರಾಮ ಸಭೆ

0

ಬಂಗ್ಲೆಗುಡ್ಡೆ ಐತಿಹಾಸಿಕ ಸ್ಥಳ ಅಭಿವೃದ್ಧಿ ಟೆಂಡರ್ ಬಗ್ಗೆ ಚರ್ಚೆ

ಅಂಬೇಡ್ಕರ್ ಭವನಕ್ಕೆ ಸ್ಥಳ ಕಾದಿರಿಸಲು ನೆಲದಲ್ಲಿ ಕೂತು ಆಗ್ರಹ

ಬೆಳ್ಳಾರೆ ಗ್ರಾಮ ಪಂಚಾಯತ್ ನ 2025 – 26 ನೇ ಸಾಲಿನ ಪ್ರಥಮ‌ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ‌‌ ನಮಿತಾ ಎಲ್ ರೈಯವರ ಅಧ್ಯಕ್ಷತೆಯಲ್ಲಿ ಜು.9 ರಂದು ಗ್ರಾಮ ಪಂಚಾಯತ್ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.
ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ನೋಡೆಲ್ ಅಧಿಕಾರಿಯಾಗಿದ್ದರು.
ಪಿಡಿಒ ಪ್ರವೀಣ್ ಕುಮಾರ್ ಸಿ.ವಿ.ಸ್ವಾಗತಿಸಿ ವರದಿ ಮಂಡಿಸಿದರು.
ಬಂಗ್ಲೆಗುಡ್ಡೆ ಐತಿಹಾಸಿಕ ಸ್ಥಳದ ಕಟ್ಟಡ ಅಭಿವೃದ್ಧಿಗೆ ಟೆಂಡರ್ ಆಗಿ ಕೆಲಸ ಪ್ರಾರಂಭವಾಗಿ ಅರ್ಧದಲ್ಲಿ ನಿಂತಿದೆ.


ಇದು ಯಾರಿಗೆ ಟೆಂಡರ್ ಆದದ್ದು ಟೆಂಡರ್ ಮಾಡಿದ್ದು ಯಾವ ಇಲಾಖೆ? ಅಲ್ಲಿ ಇದ್ದ ಪಕ್ಕಾಸು ,ಹಂಚುಗಳು ಕಾಣೆಯಾಗಿರುವುದಾಗಿ ಚರ್ಚೆಗಳು ನಡೆದವು.
ಅಂಬೇಡ್ಕರ್ ಭವನಕ್ಕೆ ಸ್ಥಳ ಕಾದಿರಿಸಲು ಇನ್ನೂ ಆಗಿಲ್ಲ.
ಈ ಬಗ್ಗೆ ಪಂಚಾಯತ್ ಉತ್ತರ ಕೊಡಬೇಕೆಂದು ಆನಂದ ಬೆಳ್ಳಾರೆಯವರು ಸಭೆಯಿಂದ ಎದ್ದು ಗ್ರಾಮ ಸಭೆಯ ಎದುರು ನೆಲದಲ್ಲಿ ಕೂತು ಆಗ್ರಹಿಸಿದರು.
ಈ ಬಗ್ಗೆ ಕೆಲಹೊತ್ತು ಚರ್ಚೆಗಳು ನಡೆದವು.
ಬಳಿಕ ಪಂಚಾಯತ್ ನವರು ಅವರನ್ನು ಸಮಾಧಾನಿಸಿದರು.ಜಾಗ ಕಾದಿರಿಸುವ ಭರವಸೆ ನೀಡಿದ ಮೇಲೆ ಅವರನ್ನು ಎದ್ದು ಚಯರನ್ನು ಕುಳಿತುಕೊಂಡರು.
ರಸ್ತೆ,ತ್ಯಾಜ್ಯ ವಿಲೇವಾರಿ ಶುಲ್ಕ,ಬೀದಿ ದೀಪದ ಬಗ್ಗೆ ಚರ್ಚೆಗಳು ನಡೆದವು.
ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವೀಣಾ ಮೂಡಾಯಿತೋಟ ,ಹಾಗೂ ಸದಸ್ಯರು ಉಪಸ್ಥಿತರಿದ್ದರು.