ಗುರೂಜಿ ಪ್ರಾರ್ಥನಾ ಬಸ್ಸಿನಲ್ಲಿ ಬಿದ್ದು ಸಿಕ್ಕಿದ ಚಿನ್ನದ ಚೈನು- ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕ ತೆ ಮೆರೆದ ನಿರ್ವಾಹಕ ಶಶಾಂಕ್

0

ಸುಳ್ಯದಿಂದ ಅಡೂರು ಕಡೆಗೆ ಹೋಗುತ್ತಿದ್ದ ಗುರೂಜಿ ಪ್ರಾರ್ಥನಾ ಖಾಸಗಿ ಬಸ್ಸಿನಲ್ಲಿ ಬಿದ್ದು ಸಿಕ್ಕಿದ ಚಿನ್ನದ ಚೈನನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಬಸ್ಸಿನ ನಿರ್ವಾಹಕ ಶಶಾಂಕ್ ಎಂಬವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಸುಳ್ಯದಿಂದಮಂಡೆಕೋಲು‌ ಮಾರ್ಗವಾಗಿ
ಅಡೂರು ಕಡೆಗೆ ಹೋಗುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರ ಅಂದಾಜು ರೂ.2 ಲಕ್ಷ ಬೆಲೆ ಬಾಳುವ ಚಿನ್ನದ ಸರ ನಿರ್ವಾಹಕನಿಗೆ ಬಿದ್ದು ಸಿಕ್ಕಿತು. ಬಿದ್ದು ಸಿಕ್ಕಿದ ಚೈನನ್ನು ತಂದು ಮಾಲಕ ಮೋಹನ್ ಗುರೂಜಿ ಯವರಿಗೆ ಒಪ್ಪಿಸಿದರು. ಬಿದ್ದು ಸಿಕ್ಕಿದ ಸರದ
ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ತಿಳಿಸಲಾಗಿತ್ತು.
ಸರ ಕಳೆದುಕೊಂಡ ವಾರಸುದಾರರಾದ ಅಡೂರು ಮೂಲದ ಸಿರಾಜುದ್ದೀನ್ ಎಂಬವರು ವಿಷಯ ತಿಳಿದು ಸುಳ್ಯಕ್ಕೆ ಬಂದು ಬಸ್ಸು ಚಾಲಕ ಮತ್ತು ನಿರ್ವಾಹಕರಿಂದ ಗುರುತು ಹೇಳಿ ಸರವನ್ನು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಬಸ್ಸು ನಿರ್ವಾಹಕ ಯುವಕನ ಪ್ರಾಮಾಣಿಕತೆಗೆ ಇದೀಗ ಸಾರ್ವಜನಿಕವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.