ಮೀಫ್ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ ದ ಉಪಾಧ್ಯಕ್ಷರಾಗಿ ಕೆ. ಎಂ. ಮುಸ್ತಫ ಪುನರಾಯ್ಕೆ

0

ದಕ್ಷಿಣ ಕನ್ನಡ, ಉಡುಪಿ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟದ 2025 – 2027 ನೇ ಸಾಲಿನ ಹಿರಿಯ ಉಪಾಧ್ಯಕ್ಷರಾಗಿ ಸುಳ್ಯದ ಸಾಮಾಜಿಕ ಧುರೀಣ ಕೆ.ಎಂ.ಮುಸ್ತಫ ಪುನರಾಯ್ಕೆಗೊಂಡಿರುತ್ತಾರೆ.


ಮಂಗಳೂರು ಪಡೀಲ್ ನಲ್ಲಿರುವ ಬರಖಾ ಸಭಾಂಗಣದಲ್ಲಿ ಜರಗಿದ ಮೀಫ್ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷ ಉಮ್ಮರ್ ಟೀಕೇ ಯವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.


ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಇದರ ಅಧ್ಯಕ್ಷರಾಗಿರುವ ಕೆ.ಎಂ.ಮುಸ್ತಫ ರವರು ಗಾಂಧಿನಗರ ಜುಮ್ಮಾಮಸ್ಜಿದ್ ಮಾಜಿ ಅಧ್ಯಕ್ಷ ರಾಗಿದ್ದು, ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕ ಉಪಸಭಾಪತಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.