ಇನ್ನರ್ ವೀಲ್ ಕ್ಲಬ್ ವತಿಯಿಂದ ದೇವರಕಾನ ಶಾಲೆಯ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಕೊಡುಗೆ ಹಾಗೂ ಗುಡ್ ಟಚ್ ಬ್ಯಾಡ್ ಟಚ್ ಮಾಹಿತಿ ಕಾರ್ಯಕ್ರಮ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಕಾನ ದ ವಿದ್ಯಾರ್ಥಿಗಳಿಗೆ ಇನ್ನರ್ ವೀಲ್ ಕ್ಲಬ್ ಸುಳ್ಯ ಇವರ ವತಿಯಿಂದ ಗುರುತಿನ ಚೀಟಿ ಕೊಡುಗೆ ಹಾಗೂ ಗುಡ್ ಟಚ್ ಬ್ಯಾಡ್ ಟಚ್ ಮಾಹಿತಿ

ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷರಾದ ಡಾ. ಸವಿತಾ ಹೊದ್ದೆಟ್ಟಿ, ಕಾರ್ಯದರ್ಶಿ ಡಾ. ಪ್ರಜ್ಞಾ ಎಂ. ಆರ್, iso ಶ್ರೀಮತಿ ಉಷಾ ಸಿ ಶೆಟ್ಟಿ, ಪೂರ್ವಧ್ಯಕ್ಷೆ ಮಮತಾ ಸತೀಶರವರು, ಶ್ರೀಮತಿ ಪ್ರಮೀಳಾ ಮುಖ್ಯ ಶಿಕ್ಷಕರು,
ಕು. ದೀಪ್ತಿ ಸಿ. ವಿ. ಅತಿಥಿ ಶಿಕ್ಷಕರು
ಗುರುಪ್ರಸಾದ್ ಎಡಮಲೆ -ಎಸ್ ಡಿ ಎಂ ಸಿ ಅಧ್ಯಕ್ಷರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕರು ಶ್ರೀಮತಿ ಪ್ರಮೀಳಾ ಸ್ವಾಗತಿಸಿದರು.

ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಯನ್ನು ವಿತರಿಸಿ ಕ್ಲಬ್ ನ ಅಧ್ಯಕ್ಷೆ, ಕೆವಿಜಿ ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕಿ ಡಾ. ಸವಿತಾ ಸಿ. ಕೆ ಅನಿಸಿಕೆ ವ್ಯಕ್ತಪಡಿಸಿದರು.ಕ್ಲಬ್ ನ ಕಾರ್ಯದರ್ಶಿ, ಕೆವಿಜಿ ಇಂಜಿನಿಯರಿಂಗ್ ಉಪನ್ಯಾಸಕಿ ಡಾ. ಪ್ರಜ್ಞಾ ಎಂ. ಆರ್.ಇವರು ವಂದನಾರ್ಪಣೆ ಮಾಡಿದರು. ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಮಾಹಿತಿ ಯನ್ನು ಕೆವಿಜಿ ಲಾ ಕಾಲೇಜು ಉಪನ್ಯಾಸಕಿ, ಕ್ಲಬ್ ನ ISO ಉಷಾ ಸಿ. ಶೆಟ್ಟಿ ಇವರು ನೀಡಿದರು.