ಜಾಲ್ಸೂರು : ಎರ್ಮೆಕ್ಕಾರಿನಲ್ಲಿ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ ಬಿದಿರು ಗುಡ್ಡೆ

0

ತೆರವು ಮಾಡದಿದ್ದರೆ ಅಪಾಯ ಖಂಡಿತ : ಜನಪ್ರತಿನಿಧಿಗಳೇ ನಿಮ್ಮಿಂದ ಸರಿಪಡಿಸಿ ಕೊಡಲು ಸಾಧ್ಯವಿಲ್ಲವೇ ? : ಊರವರ ಪ್ರಶ್ನೆ

ಜಾಲ್ಸೂರು ಗ್ರಾಮದ ಎರ್ಮೆಕ್ಕಾರು ರಸ್ತೆಯಲ್ಲೊಮ್ಮೆ ನಡೆದುಕೊಂಡು‌ ಹೋಗಬೇಕು. ಹೋಗುವಾಗ ವಿದ್ಯುತ್ ತಂತಿಯನ್ನೊಮ್ಮೆ ಗಮನಿಸಿ, ಒಂದು‌ ಕಡೆ ಬಿದಿರಿನ ಗುಡ್ಡೆಯೊಂದು‌ ಪೂರ್ತಿಯಾಗಿ ವಿದ್ಯುತ್ ತಂತಿಯ ಮೇಲೆ ಬಂದು ಒರಗಿ‌ ನಿಂತಿದೆ. ಈ ರಸ್ತೆಯಲ್ಲಿ ಪ್ರತೀ ದಿನ ಜನರು ಓಡಾಡುತ್ತಿದ್ದು ಭಯಭೀತರಾಗಿದ್ದಾರೆ. ವಿದ್ಯುತ್ ತಂತಿಗೆ ಒರಗಿರುವ ಬಿದಿರನ್ನು ತೆರವು ಮಾಡದಿದ್ದರೆ ಅಪಾಯ‌ ಖಂಡಿತ.

ಇಲ್ಲಿಯ‌ ಜನರಿಂದ ಮತ ಪಡೆದು ಜನಪ್ರತಿನಿಧಿಗಳಾಗಿ ಆರಿಸಿ ಬಂದವರು ಕನಿಷ್ಟ ಜನರ ಈ ಬೇಡಿಕೆಯನ್ನಾದರೂ ಈಡೇರಿಸಬೇಕಲ್ಲವೇ. ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿ ಕಡಿಸುವ ವ್ಯವಸ್ಥೆ ಮಾಡಬೇಕಲ್ಲವೇ? ಅಪಾಯ ಸಂಭವಿಸಿದರೆ ಯಾರು ಹೊಣೆ ಹೊರುತ್ತಾರೆ ಎಂದು ಊರವರು ಹೇಳುತ್ತಾರೆ.

ಈ ಕುರಿತು ಈ‌ ಭಾಗದ‌ ನಿವಾಸಿಯೊಬ್ಬರು ಪ್ರತಿಕ್ರಿಯೆ ನೀಡಿ, “ನಾವು ಈ ರಸ್ತೆಯಲ್ಲಿ ಹೋಗುವವರು. ವಿದ್ಯುತ್ ತಂತಿಯ ಮೇಲೆ ಬಿದಿರು, ಮರ ಗೆಲ್ಲುಗಳು ಬಿದ್ದಿದೆ. ದೂರು ಮಾಡಿದರೂ ತೆಗೆಯುವುದಿಲ್ಲ.‌ ಯಾವಾಗ ಅಪಾಯ ಸಂಭವಿಸುವುದೋ ಎಂದು‌ ಭಯದಲ್ಲಿದ್ದೇವೆ.‌ಒಮ್ಮೆ ಇದನ್ನು ಸರಿಪಡಿಸಲಿ” ಎಂದು‌ ತಿಳಿಸಿದ್ದಾರೆ.