ನೃತ್ಯ ಕಲಾವಿದೆ ರಚಿತಾ ಅವರಿಗೆ ಕಲಾರತ್ನ ಗೌರವ

0

ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ವತಿಯಂದ ನೀಡುವ 281 ಸರಣಿ ಯ ವ್ಯಾಲ್ಯೂ ಅವಾರ್ಡ್ ಕಾರ್ಯಕ್ರಮದಲ್ಲಿ ಗುತ್ತಿಗಾರಿನ ರಚಿತಾ ರವರಿಗೆ ಕಲಾ ರತ್ನ ಸನ್ಮಾನ ನೀಡಲಾಯಿತು.

ಭರತ ನಾಟ್ಯ , ಯಕ್ಷಗಾನ, ನಾಟಕ ಕಲಾವಿದೆಯಾಗಿರುವ ರಚಿತಾ ಗುತ್ತಗಾರಿನಲ್ಲಿ ನೃತ್ಯ ಸಾರಂಗ ಕಲಾಕುಟೀರ ಮೂಲಕ ನೃತ್ಯ ತರಬೇತಿ ನೀಡುತಿದ್ದಾರೆ . ಪ್ರಸ್ತುತ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಇಂಗ್ಲೀಷ್ ಹಾಗೂ ಸಮಾಜ ವಿಜ್ಞಾನ ಶಿಕ್ಷಕಿ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಿವೃತ್ತ ಎ.ಎಸ್.ಐ. ಸಾಂತಪ್ಪ ಇಜ್ಜೆಲುಮುಕ್ಕಿ ಮತ್ತು ಸುನೀತ ಇಜ್ಜೆಲುಮುಕ್ಕಿ ದಂಪತಿಯ ಪುತ್ರಿ.