Home Uncategorized ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗ ಗೌಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ...

ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗ ಗೌಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನ

0


ರಾಜ್ಯ ಒಕ್ಕಲಿಗರ ಸಂಘ(ರಿ) ಬೆಂಗಳೂರು ಇದರ ವತಿಯಿಂದ ಒಕ್ಕಲಿಗ ಗೌಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ ೯೫ ರಷ್ಟು ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.


ಅರ್ಹ ವಿದ್ಯಾರ್ಥಿಗಳು ನಿಗದಿ ಪಡಿಸಿದ ಅರ್ಜಿ ನಮೂನೆಯನ್ನು ಆಯಾ ತಾಲೂಕಿನ ಸಂಬAಧಪಟ್ಟ ಅಧ್ಯಕ್ಷರುಗಳಿಂದ ಪಡೆದುಕೊಂಡು, ತಮ್ಮ ಅಂಕಪಟ್ಟಿಯ ನಕಲು, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ಪಾಸ್ ಬುಕ್ ಪ್ರತಿಯೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ, ಈ ಕೆಳಕಂಡ ವಿಳಾಸಕ್ಕೆ ದಿನಾಂಕ ಜುಲೈ 27ರ ಒಳಗಾಗಿ ಸಲ್ಲಿಸುವಂತೆ ಕೋರಲಾಗಿದೆ.
ವಿಳಾಸ: ಪ್ರತಿಭಾ ಪುರಸ್ಕಾರ ವಿಭಾಗ
ನಾಡ ಪ್ರಭು ಕೆಂಪೇಗೌಡರ ಭವನ
ರಾಜ್ಯ ಒಕ್ಕಲಿಗರ ಸಂಘ, ಕೆ.ಆರ್.ರಸ್ತೆ ವಿ.ವಿ.ಪುರಂ,
ಬೆAಗಳೂರು-೫೬೦೦೦೪

ವಿ.ಸೂ: ಅರ್ಜಿಯ ಪ್ರತಿಯನ್ನು ಖಡ್ಡಾಯವಾಗಿ ಡಾ.ರೇಣುಕಾ ಪ್ರಸಾದ್ ಕೆ.ವಿ. ಉಪಾಧ್ಯಕ್ಷರು ರಾಜ್ಯ ಒಕ್ಕಲಿಗರ ಸಂಘ ಇವರ ಕಛೇರಿ ಎ.ಓ.ಎಲ್.ಇ(ರಿ) ಕಮಿಟಿ ‘ಬಿ’ ಕುರುಂಜಿಬಾಗ್ ಸುಳ್ಯ, ದ.ಕ ಇಲ್ಲಿಗೆ ತಲುಪಿಸುವಂತೆ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: 9448725573

NO COMMENTS

error: Content is protected !!
Breaking