ಸರಕಾರಿ ಪ್ರೌಢಶಾಲೆ ಮರ್ಕಂಜದ ಕ್ರೀಡಾಂಗಣದಲ್ಲಿ ಕೋ ಕೋ ಅಂಕಣ ರಚನೆ

0

ಸರಕಾರಿ ಪ್ರೌಢಶಾಲೆ ಮರ್ಕಂಜದ ಕ್ರೀಡಾಂಗಣದಲ್ಲಿ ಕೋ ಕೋ ಅಂಕಣ ರಚನೆಯು ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಗಣೇಶ್ ಎಂ. ಟಿ.ರವರ ಮಾರ್ಗದರ್ಶನದಲ್ಲಿ ಶ್ರಮ ಸೇವೆಯ ಮೂಲಕ ಜುಲೈ 19ರಂದು ನಡೆಯಿತು. ಶ್ರಮದಾನದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಿತ್ಯಾನಂದ ಭೀಮಗುಳಿ, ಸದಸ್ಯರುಗಳಾದ ದಿನಕರ ಕಾಳಮನೆ, ಕುಶಾಲಪ್ಪ ಕಬ್ಬಿನಡ್ಕ, ಹೇಮಕುಮಾರ ಕಂಜಿಪಿಲಿ, ಮಹಾವೀರ ಇಂದ್ರ, ಮಾಜಿ ಅಧ್ಯಕ್ಷರಾದ ಆನಂದ ಗೌಡ ಬಾನೂರು, ಮಾಜಿ ಸದಸ್ಯರಾದ ಕಾರ್ಯಪ್ಪ ಗೌಡ ಕಂಜಿಪಿಲಿ, ಮಕ್ಕಳ ಸುರಕ್ಷಾ ಸಮಿತಿಯ ಸದಸ್ಯರಾದ ಆನಂದ ಹಳ್ದಡ್ಕ, ಪೋಷಕರಾದ ಗಂಗಾಧರ ದೋಳ , ಹಿರಿಯ ವಿದ್ಯಾರ್ಥಿ ಸಂಘಟನೆಯ ವಿನ್ಯಾಸ್ ಹೊಸೊಳಿಕೆ ಭಾಗವಹಿಸಿದ್ದರು. ಶಾಲಾ ಶಿಕ್ಷಕಿಯರು ಹಾಗೂ ಅಡುಗೆ ಸಿಬ್ಬಂದಿಯವರು ಸಹಕರಿಸಿದರು .