ಪಂಬೆತ್ತಾಡಿಯಲ್ಲಿ ಆಟಿ ಸಂಭ್ರಮ-2025

0

ಅಮೃತ ಮಹಿಳಾ ಮಂಡಲ ಪಂಬೆತ್ತಾಡಿ ಹಾಗೂ ಅಕ್ಷತಾ ಯುವತಿ ಮಂಡಲ ಪಂಬೆತ್ತಾಡಿ ಇವರ ಜಂಟಿ ಆಶ್ರಯದಲ್ಲಿ ಆಟಿ ಸಂಭ್ರಮ ಕಾರ್ಯಕ್ರಮವು ಜು. 20 ರಂದು ಪಂಬೆತ್ತಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಮೃತ ಮಹಿಳಾ ಮಂಡಲ ಪಂಬೆತ್ತಾಡಿ ಅಧ್ಯಕ್ಷೆ ಶ್ರೀಮತಿ ಲಲಿತಾ ಬಾಬ್ಲುಬೆಟ್ಟು ವ‌ಹಿಸಿದ್ದರು. ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕಳ ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ನಿವೃತ್ತ ಅಂಗವಾಡಿ ಕಾರ್ಯಕರ್ತೆ ಶ್ರೀಮತಿ ಸುಶೀಲಾ ದೇವಪ್ಪ ನಾಯ್ಕ್ ಕೃಷ್ಣನಗರ, ಸುಳ್ಯ ತಾಲೂಕು ಮಹಿಳಾ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಅನಿತಾ ಸುತ್ತುಕೋಟೆ, ಪಂಬೆತ್ತಾಡಿ, ಮಹಿಳಾ ಮಂಡಲದ ಸ್ಥಾಪಕಾಧ್ಯಕ್ಷೆ ಶ್ರೀಮತಿ ರತಿದೇವಿ ಜಾಕೆ,ಅಕ್ಷತಾ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಮಠ, ಶ್ವೇತ ಪಂಜದಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆ ಶ್ರೀಮತಿ ರಮ್ಯಾ ದಿಲೀಪ್ ಬಾಬ್ಲುಬೆಟ್ಟು ,. ಶ್ರೀಮತಿ ಲಲಿತಾ ಬಾಬ್ಲುಬೆಟ್ಟು ಸ್ವಾಗತಿಸಿದರು . ಶ್ರೀಮತಿ ರಂಜನಿ ಪಂಜಬೀಡು ನಿರೂಪಿಸಿದರು.ಶ್ರೀಮತಿ ಧನಲಕ್ಷ್ಮಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಹಾಗೂ ಸುಮಾರು 30 ಬಗೆಯ ತಿಂಡಿ ತಿನಿಸುಗಳು ಮಹಿಳಾಮಂಡಲ ಹಾಗೂ ಯುವತಿ ಮಂಡಲದ ಸದಸ್ಯರು ಮನೆಯಲ್ಲಿ ತಯಾರಿಸಿ ತಂದಿದ್ದರು