ರೆಂಜಾಳ: ಕೃಷಿಗೆ ಕಾಡಾನೆ ದಾಳಿ – ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ

0

ರೆಂಜಾಳ ಶಾಸ್ತ್ರವು ಯುವಕ ಮಂಡಲದ ನೇತೃತ್ವದಲ್ಲಿ ಕೃಷಿಕರ ಸಭೆ

ಶಾಸಕರ ಉಪಸ್ಥಿತಿ

ಕಳೆದ ಹಲವು ಸಮಯಗಳಿಂದ ಮರ್ಕಂಜದ ಭಾಗದ ಮೈರಾಜೆ, ರೆಂಜಾಳ, ಹೈದಗೂರು, ಕೊರತ್ತೋಡಿ, ಕೊಡಪಾಲ ಭಾಗದ ಕೃಷಿ ತೋಟಕ್ಕೆ ನಿರಂತರ ದಾಳಿ ನಡೆಸುತ್ತಿರುವ ಆನೆ ಮತ್ತು ರಸ್ತೆಯಲ್ಲಿ ಸಂಚಾರಿಸುತ್ತಿರುವುದರಿಂದ ಸಾರ್ವಜನಿಕ ರಲ್ಲಿ ಭಯ ಅವರಿಸಿರುವ ಹಿನ್ನೆಲೆಯಲ್ಲಿ ರೆಂಜಾಳ ಶ್ರೀ ಶಾಸ್ತ್ರವು ಯುವಕ ಮಂಡಲದ ನೇತೃತ್ವದಲ್ಲಿ ಹರೀಶ್ ಕಂಜಿಪಿಲಿ ಯವರ ಮುಂದಾಳತ್ವದಲ್ಲಿ ಸುಳ್ಯ ಶಾಸಕರ ಅಧ್ಯಕ್ಷತೆಯಲ್ಲಿ ನಿನ್ನೆ (ಜು. 21) ರೆಂಜಾಳ ಕ್ಷೇತ್ರದ ವಿನಾಯಕ ಸಭಾ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಕೃಷಿಕರು ಆನೆ ಹಾವಳಿ ಯಿಂದ ಹಾನಿಯಾಗಿರುವ ಬಗ್ಗೆ ಆತಂಕ ದ ಬಗ್ಗೆ ವಿವರಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಆನೆ ಕಂದಕ ನಿರ್ಮಾಣ, ಸೋಲಾರ್ ಬೇಲಿ ನಿರ್ಮಾಣ ದ ಬಗ್ಗೆ ಮಾಹಿತಿ ನೀಡಿದರಲ್ಲದೆ, ಸಾರ್ವಜನಿಕರು ರಸ್ತೆಯಲ್ಲಿ ಸಂಚಾರಿಸುವಾಗ ಎಚ್ಚರ ವಹಿಸುವಂತೆ ಹೇಳಿದರು.

ಶಾಸಕಿ ಭಾಗೀರಥಿ ಮುರುಳ್ಯರವರು ಮಾತನಾಡಿ ಈಗಾಗಲೇ ಮೂರು ಬಾರಿ ಅರಣ್ಯ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಸೋಲಾರ್ ಬೇಲಿ ನಿರ್ಮಾಣಕ್ಕೆ ಈಗಾಗಲೇ ನೀಡುತ್ತಿರುವ ಶೇ. 50 ಸಬ್ಸಿಡಿ ಮೊತ್ತವನ್ನು ಶೇ.90% ಕ್ಕೆ ಏರಿಸಬೇಕೆಂದು ಮನವಿ ಸಲ್ಲಿಸಲಾಗಿದೆ. ಹಾನಿಗಳಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಿ ಆನೆ ದಾಳಿ ತಡೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಮನವಿ ಸಲ್ಲಿಸಲಾಗಿದೆ. ನಮ್ಮ ಮನವಿಗೆ ಸಚಿವರು ಸ್ಪಂದಿಸುವ ಭರವಸೆ ಇದೆ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸುಳ್ಯ ವಲಯ ಎಸಿಎಫ್ ಪ್ರಶಾಂತ್ ಕುಮಾರ್ ಪೈ, ವಲಯ ಅರಣ್ಯಾಧಿಕಾರಿ ಎನ್ ಮಂಜುನಾಥ್,
ಗ್ರಾ.ಪಂ ಅಧ್ಯಕ್ಷೆ ಗೀತಾ ಹೊಸೋಲಿಕೆ, ಪ್ರಮುಖರಾದ ರಾಘವ ಗೌಡ ಕಂಜಿಪಿಲಿ, ಜಗನ್ಮೋಹನ ರೈ ರೆಂಜಾಳ, ಸತೀಶ್ ರಾವ್ ದಾಸರಾಬೈಲು, ಸುಬ್ರಮಣ್ಯ ಭಟ್ ಬಳ್ಳಾಕ್ಕನ, ರಾಜೇಶ್ವರಿ ಕುಮಾರಸ್ವಾಮಿ, ಚಿನ್ನಪ್ಪ ಬೇರಿಕೆ, ಶಶಿಕಾಂತ್ ಗುಳುಗಮೂಳೆ, ಸವಿನ್ ಕೊಡಪಾಲ, ಶಾಸ್ತ್ರವು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ, ಉಪ ವಲಯಾರಣ್ಯಧಿಕಾರಿ ಜಯಪ್ರಕಾಶ್ ಹಾಗೂ ಕೃಷಿಕರು, ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.