








ಬೆಳ್ಳಾರೆಯಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಕಾವಿನಮೂಲೆಯಲ್ಲಿ ರಸ್ತೆ ಬದಿ ಇರುವ ಮರಗಳು ವಿದ್ಯುತ್ ಕಂಬಕ್ಕೆ ಬಿದ್ದಿದ್ದು ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ.
ಇದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿದ್ದು ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ರಾತ್ರಿಯೆ ಮರ ಹಾಗೂ ವಿದ್ಯುತ್ ವಯರ್ ತೆರವು ಕಾರ್ಯ ಪ್ರಾರಂಭಗೊಂಡಿರುವುದಾಗಿ ಬೆಳ್ಳಾರೆ ಮೆಸ್ಕಾಂ ಜೆ.ಇ.ತಿಳಿಸಿದ್ದಾರೆ.










