ಪಾಲೆಪ್ಪಾಡಿ ಮಂಜುಶ್ರೀ ಗೆಳೆಯರ ಬಳಗದ ವಾರ್ಷಿಕ ಮಹಾಸಭೆ

0

ಅಧ್ಯಕ್ಷ ದಯಾನಂದ ಕಟ್ಟತ್ತಾರು,ಕಾರ್ಯದರ್ಶಿ ನಾಗಪ್ಪ ಪಾಲೆಪ್ಪಾಡಿ

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಮಂಜುಶ್ರೀ ಗೆಳೆಯರ ಬಳಗ ಇದರ 2025 – 26 ನೇ ಸಾಲಿನ ವಾರ್ಷಿಕ ಮಹಾಸಭೆಯು ಜು.13 ರಂದು ನಡೆಯಿತು.
ನೂತನ ಅಧ್ಯಕ್ಷರಾಗಿ‌ ದಯಾನಂದ ‌ಕಟ್ಟತ್ತಾರು ಆಯ್ಕೆಗೊಂಡರು.ಕಾರ್ಯದರ್ಶಿಯಾಗಿ‌ ನಾಗಪ್ಪ ಪಾಲೆಪ್ಪಾಡಿ, ಉಪಾಧ್ಯಕ್ಷರಾಗಿ ಪ್ರಮೋದ್ ಕಣಿಲೆಗುಂಡಿ, ಜತೆಕಾರ್ಯದರ್ಶಿಯಾಗಿ ಪ್ರದೀಪ್ ಪಾಲೆಪ್ಪಾಡಿ, ಖಜಾಂಜಿ ಧನಂಜಯ ‌ದರ್ಖಾಸ್ತು, ಕ್ರೀಡಾ ಕಾರ್ಯದರ್ಶಿ ಜೀವರಾಜ್ ಸಿ.ಕೂಪ್, ಜತೆಕಾರ್ಯದರ್ಶಿಯಾಗಿ ಪ್ರಸನ್ನ ಕಟ್ಟತ್ತಾರು ಹಾಗೂ ಗೌರವಾಧ್ಯಕ್ಷರಾಗಿ ಶಿವಪ್ರಸಾದ್ ಕಟ್ಟತ್ತಾರು ಆಯ್ಕೆಗೊಂಡರು.


ಬಳಿಕ ಸಂಘದ ವತಿಯಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಶಾಸಕಿ ಭಾಗೀರಥಿ ಮುರುಳ್ಯರವರು ಗಿಡ ನೆಡುವ ಮೂಲಕ ಪರಿಸರ ದಿನವನ್ನು ಉದ್ಘಾಟಿಸಿದರು. ಐವರ್ನಾಡು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಎನ್ .ಮನ್ಮಥ ರವರು ಭಾಗವಹಿಸಿದ್ದರು. ಸಂಘದ ವತಿಯಿಂದ ಪೆರಿಯಬಾಣೆ ಅಂಗಣದಲ್ಲಿ ಗಿಡ ನೆಡುವುದು ಹಾಗೂ ಹಲಸಿನ ಬೀಜ ,ಪುನರ್ಪುಳಿ ಹಾಗೂ ಮಾವಿನ ಹಣ್ಣಿನ ಗೊರಟೆಯನ್ನು ಬಿತ್ತನೆ ಮಾಡಲಾಯಿತು.

ನೂತನ ಶ್ರೀ ಗಣೇಶೋತ್ಸವ ಸಮಿತಿ ರಚನೆ
ಸಂಘದ ವತಿಯಿಂದ ಸಾಲಿನ ನೂತನ ಗಣೇಶೋತ್ಸವ ಸಮಿತಿ ರಚಿಸಲಾಯಿತು. ಗಣೇಶೋತ್ಸವದ ಗೌರವಾಧ್ಯಕ್ಷರಾಗಿ ಹರೀಶ ರಾವ್ ಉದ್ದಂಪಾಡಿ,
ಅಧ್ಯಕ್ಷರಾಗಿ ಶಾಂತರಾಮ ಕಣಿಲೆಗುಂಡಿ,
ಕಾರ್ಯದರ್ಶಿಯಾಗಿ ಜಗತ್ ದೇರಾಜೆ,
ರವರು ಸರ್ವಾನುಮತದಿಂದ ಆಯ್ಕೆಗೊಂಡರು.


ಉಪಾಧ್ಯಕ್ಷರಾಗಿ ಜಗದೀಶ ದರ್ಖಾಸ್ತು, ಉಪಕಾರ್ಯದರ್ಶಿಯಾಗಿ ವಿಶ್ವನಾಥ ಕಟ್ಟತ್ತಾರು ಆಯ್ಕೆಗೊಂಡರು.