ವಯೋ ನಿವೃತ್ತಿಗೊಂಡ ಡಾ. ವಿಶ್ವನಾಥ ಬದಿಕಾನರವರಿಗೆ ಬದಿಕಾನ ಮನೆಯಲ್ಲಿ ಗೌರವ

0

ಇತ್ತೀಚಿಗೆ ವಯೋ ನಿವೃತ್ತಿಗೊಂಡ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ವಿಶ್ವನಾಥ ಬದಿಕಾನರವರಿಗೆ ಅವರ ಬದಿಕಾನ ಮನೆಯಲ್ಲಿ ಗೌರವ ಕಾರ್ಯಕ್ರಮ ಜು.27ರಂದು ನಡೆಯಿತು.

ಡಾ.ವಿಶ್ವನಾಥ ಬದಿಕಾನರವರ ಹಿರಿಯ ಸಹೋದರ ಮೋನಪ್ಪ ಗೌಡ, ಲಿಂಗಪ್ಪ ಗೌಡ, ಆನಂದ ಗೌಡ, ಕೃಷ್ಣಪ್ರಸಾದ್, ಭಾಸ್ಕರ ಗೌಡ ಮತ್ತು ಮನೆಯವರು ಸೇರಿ ಡಾ. ವಿಶ್ವನಾಥ ಬದಿಕಾನ ಮತ್ತು ಶ್ರೀಮತಿ ಸರೋಜಾ ವಿಶ್ವನಾಥ ದಂಪತಿಗಳನ್ನು ಶಾಲು, ಪೇಟಾ, ಹಣ್ಣುಹಂಪಲು, ಸ್ಮರಣಿಕೆ ನೀಡಿ ಗೌರವಿಸಿದರು.

ಅರೆಭಾಷೆ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ, ವಿಶ್ರಾಂತ ಪ್ರಾಂಶುಪಾಲ ಡಾ. ಪೂವಪ್ಪ ಕಣಿಯೂರು, ಪ್ರಾಧ್ಯಾಪಕ ಸಂಜೀವ ಕುದ್ಪಾಜೆ, ದೀಕ್ಷಿತ್ ಬದಿಕಾನ, ಕೃತಿಕ್ ಬದಿಕಾನ ಶುಭಹಾರೈಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬದಿಕಾನ ಮನೆಯವರು, ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು.

ಭರತೇಶ್ ಅಲಸಂಡೆಮಜಲು ಕಾರ್ಯಕ್ರಮ ನಿರ್ವಹಿಸಿದರು.