ಎಸ್‌ಡಿಎಂಸಿ ಒಕ್ಕೂಟ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಮನವಿ

0

ಪ್ರಾಥಮಿಕ ಶಾಲಾ ಮಕ್ಕಳು ೧೪ ವರ್ಷದ ವಯೋಮಾನ ನಿಗದಿಯಿಂದ ಶಾಲಾ ಕ್ರೀಡಾಕೂಟದಿಂದ ವಂಚಿತರಾಗುತ್ತಿರುವುದನ್ನು ಸರಿಪಡಿಸುವ ಬಗ್ಗೆ ಶಾಲಾ ಎಸ್‌ಡಿಎಂಸಿ ಒಕ್ಕೂಟ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಒಕ್ಕೂಟದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಕೊಲ್ಲಮೊಗ್ರ, ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ಹಾಗೂ ಗುತ್ತಿಗಾರು ಪಿಎಂ ಶ್ರೀ ಶಾಲೆಯ ಎಸ್‌ಡಿಎಂಸಿ ಸದಸ್ಯರುಗಳಾದ ದಿನೇಶ್ ಹಾಲೆಮಜಲು ಲೋಕೇಶ್ ತುಂಬತ್ತಾಜೆ, ದಯಾನಂದ ಕನ್ನಡ್ಕ, ಕ್ರೀಡಾ ತರಬೇತುದಾರ ವಿನ್ಯಾಸ್ ಕೊಚ್ಚಿ, ದೇವಚಳ್ಳ ಶಾಲೆಯ ಸ್‌ಡಿಎಂಸಿ ಅಧ್ಯಕ್ಷ ಜಯಾನಂದ ಪಟ್ಟೆ, ವಳಲಂಬೆ ಶಾಲೆಯ ಅಧ್ಯಕ್ಷ ರವೀಶ್ ಮೊಟ್ಟೆಮನೆ, ಮಂಡೆಕೋಲು ಗ್ರಾಮದ ಪುತ್ಯಶಾಲೆಯ ಅಧ್ಯಕ್ಷ ಪುಟ್ಟಣ್ಣ ಉಪಸ್ಥಿತರಿದ್ದರು.