ಛತ್ತೀಸ್‌ಗಢನಲ್ಲಿ ಇಬ್ಬರು ಕ್ರೈಸ್ತಧರ್ಮ ಭಗನಿಯರ ಬಂಧನ – ಸಂವಿಧಾನ ಹಕ್ಕಿನ ಉಲ್ಲಂಘನೆ : ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ನಿರ್ಣಯ

0

ಛತ್ತೀಸ್‌ಗಢದಲ್ಲಿ ಇಬ್ಬರು ಧರ್ಮಭಗನೀಯರು ಸೇರಿ ಮೂವರನ್ನು ಸತ್ಯಕ್ಕೆ ದೂರವಾದ ಕಾರಣಗಳನ್ನು ಮುಂದಿಟ್ಟು ಬಂಧಿಸಿ ಜೈಲಿಗೆ ಹಾಕಲಾಗಿದೆ. ಇದು ಅತ್ಯಂತ ಹೀನಾಯ ಕೆಲಸ ಆಗಿದ್ದು, ಸರಕಾರ ಹಾಗೂ ಕೆಲವು ಸಂಘಟನೆಗಳು ಒಟ್ಟು ಸೇರಿ ಭಾರತದ ಸಂವಿಧಾನದಲ್ಲಿ ಹೇಳಿರುವ ಜಾತ್ಯಾತೀತ ಹಾಗೂ ಸಮಾಜವಾದ ಹಕ್ಕುಗಳ ಉಲ್ಲಂಖನೆ ಕೂಡ ಮಾಡಿರುತ್ತದೆ ಎಂದು ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ನಿರ್ಣಯಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದ ಪ್ರಜ್ಞಾವಂತ ಜನರು ಇದನ್ನು ಒಪ್ಪುವ ಹಾಗಿಲ್ಲ. ಪ್ರಯಾಣಕ್ಕೆ ಬೇಕಾದ ಎಲ್ಲಾ ದಾಖಲೆಗಳು, ಅವರ ಪೋಷಕರ ಅನುಮತಿಯೂ ಜೊತೆಯಲ್ಲಿ ಇದ್ದರೂ ಭಾರತದೊಳಗೆ ಪ್ರಯಾಣ ಮಾಡಲು ಅವಕಾಶ ನಿರಾಕರಿಸಿರುವುದು, ಪ್ರಾಯಕ್ಕೆ ಬಂದಂದಹ ಪ್ರಜೆಗಳಿಗೆ ಸಾಧ್ಯ ಇಲ್ಲ ಎಂದರೆ ಇದು ಸಂವಿಧಾನದ ಸ್ಪಷ್ಟವಾದ ಉಲ್ಲಂಘನೆ ಕೂಡ ಆಗಿರುತ್ತದೆ ಎಂದು ಅದು ತಿಳಿಸಿದೆ.

ಈ ಬಗ್ಗೆ ಏSಒಅಂ ಅತ್ಯಂತ ತೀವ್ರವಾದ ಕಳವಳ ವ್ಯಕ್ತಪಡಿಸಿದ್ದು, ಕೂಡಲೆ ಪ್ರಜಾಪ್ರಭುತ್ವ ನೀಡುವ ಹಕ್ಕಿನ ಆಧಾರದಲ್ಲಿ ಇವರನ್ನು ಜೈಲಿನಿಂದ ಹೊರಕಳುಹಿಸಿ ಕಾನೂನು ಬದ್ಧವಾಗಿ ಬದುಕಲು ಎಲ್ಲರಿಗೂ ಇರುವ ಹಕ್ಕನ್ನು ಎತ್ತಿ ಹಿಡಿಯಬೇಕೆಂದು ಕೋರಿದ್ದಾರೆ.

ಈ ಬಗ್ಗೆ ಬಿಟ್ಟಿ ನೆಡುನಿಲಂ ರವರ ಅಧ್ಯಕ್ಷತೆಯಲ್ಲಿ KSMCA ಕೇಂದ್ರ ಸಮಿತಿ ಸಭೆಯಲ್ಲಿ ಖಂಡನಾ ನಿರ್ಣಯವನ್ನು ಮಂಡಿಸಲಾಗಿದ್ದು
ನಿರ್ದೇಶಕರಾದ ರೆ ಫಾ ಆದರ್ಶ್ ಜೋಸೆಫ್, ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಎಂ ಜೆ, ಕ್ಯಾಥೋಲಿಕ್ ಕಾಂಗ್ರೆಸ್ ಜಾಗತಿಕ ಸಮಿತಿ ಕಾರ್ಯದರ್ಶಿ ಜೈಸನ್ ಪಟ್ಟೇರಿ ಹಾಗೂ ಕೇಂದ್ರ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.