ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳಸಿಕೊಳ್ಳಬೇಕು : ಡಾ. ಉಮಾ ಬಿ. ವಿ.
ಜ್ಯೋತಿ ಸರಕಾರಿ ಅನುದಾನಿತ ಪ್ರೌಢ ಶಾಲೆ ಪೆರಾಜೆ, ಪ್ರಣವ ಪೌಂಡೇಶನ್ (ರಿ) ಬೆಂಗಳೂರು ಸಹಯೋಗ ಆಡಳಿತದ, ಆರ್ ವಿ.ತಾಂತ್ರಿಕ ಇಂಜಿನಿಯರಿಂಗ್ ಕಾಲೇಜು ಬೆಂಗಳೂರು, ವಿಆರ್ ಎಲ್ ಲಾಜಿಸ್ಟಿಕ್ಸ್ ಸಹಯೋಗದಲ್ಲಿ
ಜ್ಯೋತಿ ಪ್ರೌಢ ಶಾಲೆಯಲ್ಲಿ “ಪುಸ್ತಕ 2025” ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಜು.1 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲಾ ವಿದ್ಯಾರ್ಥಿಗಳು ಅತಿಥಿಗಳನ್ನು ಪಥ ಸಂಚಲನದೊಂದಿಗೆ ಸ್ವಾಗತ ಮಾಡಿದರು.
ಬೆಂಗಳೂರು ಆರ್ ವಿ.ತಾಂತ್ರಿಕ ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕರು ಶ್ರೀಮತಿ ಡಾ.ಉಮಾ ಬಿ. ವಿ ಹಾಗೂ ಪೆರಾಜೆ ಗ್ರಾಮ.ಪಂ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ ಜಂಟಿಯಾಗಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಉಮಾ. ಬಿ. ವಿ ಅವರಿಗೆ ಸಂಸ್ಥೆ ಪರವಾಗಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು.” ಪುಸ್ತಕ ಎಂದರೆ ಜ್ಞಾನದ ಭಂಡಾರ. ಮಕ್ಕಳು ಹೆಚ್ಚಾಗಿ ಪುಸ್ತಕವನ್ನು ಓದಿ ಜ್ಞಾನ ದ ವೃದ್ಧಿಯನ್ನು ರೂಢಿಸಿಕೊಳ್ಳಬೇಕು. ನಮ್ಮ ಕಾಲದಲ್ಲಿ ಪುಸ್ತಕಗಳು ವಿರಳವಾಗಿದ್ದು ಹೆಚ್ಚಿನ ವಿದ್ಯಾಭಾಸ ಪಡೆದುಕೊಳ್ಳಲು ತುಂಬಾ ಕಷ್ಟಗಳನ್ನು ಅನುಭವಿಸುತ್ತಿದೆವು. ಆದರೆ ಈಗಿನ ಕಾಲದಲ್ಲಿ ಪುಸ್ತಕಗಳು ಪ್ರತೀ ಗ್ರಾಮದ ಶಾಲೆಯ ಗ್ರಂಥಾಲಯದಲ್ಲಿ ಲಭ್ಯವಾಗುತ್ತಿದೇ, ಆದ್ದರಿಂದ ಪ್ರತಿನಿತ್ಯ ಪುಸ್ತಕ ವನ್ನು ಪ್ರೀತಿಸಿ ಮಹತ್ವದ ಅರಿವನ್ನು ಪಡೆದು ಕೊಳ್ಳಬೇಕು. ಆಗ ಮಾತ್ರ ನಮಗೆ ಮುಂದಿನ ಜೀವನದಲ್ಲಿ ಸಾಧನೆ ಮಾಡಲು ಸಹಾಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
















ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ ಮತ್ತು ಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಜಿ.ಆರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಬಳಿಕ ವಿದ್ಯಾರ್ಥಿಗಳಿಗೆ ಪುಸ್ತಕಾ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಪ್ರಣವ ಪೌಂಡೇಶನ್ (ರಿ ) ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷ ರಾಕೇಶ್ ರೈ , ಮಹೇಶ್ ಕುಮಾರ್ ಮೇನಾಲ, ಪೆರಾಜೆ ಗ್ರಾಂ.ಪಂ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಸದಸ್ಯರಾದ ಸುರೇಶ್ ಪೆರು ಮುಂಡ, ಉದಯ ಚಂದ್ರ ಕುಂಬಳ ಚೇರಿ, ಪ್ರವೀಣ್ ಮಜು ಕೋಡಿ, ಸುಭಾಷ್ ಚಂದ್ರ ಬಂಗಾರ ಕೋಡಿ, ಜಯಲಕ್ಷ್ಮೀ ಧರಣೀಧರ, ಪೂರ್ಣಿಮಾ ಕುಂಡಾಡು, ಚಂದ್ರಾವತಿ ಜಯರಾಮ , ಭೂ ದೇವಿ ನಾಯಕ್, ರಾಮ ಕುಂಜ ಶಾಲೆಯ ಉಷಾಕುಮಾರಿ, ಮುಕುಂದ ಕೆ. ಬಿ , ಹಾಗೂ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಉಪಸ್ಥಿತರಿದ್ದರು.

ವಿದ್ಯಾರ್ಥಿ ಧನುಷ್ ಗೌಡ ಪ್ರಾರ್ಥಿಸಿ, ಪ್ರಣವ ಪೌಂಡೇಶನ್ (ರಿ ) ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷ ರಾಕೇಶ್ ರೈ
ಕಾರ್ಯಕ್ರಮವನ್ನು ಕಚೇರಿ ನಿರ್ವಾಹಕಿ ಚಂದ್ರ ಮತಿ ಕಾರ್ಯಕ್ರಮವನ್ನು ನಿರೂಪಿಸಿದರು.
ಬಳಿಕ ಪೆರಾಜೆ ವ್ಯಾಪಿಯ ಎಲ್ಲಾ ಸರಕಾರಿ ಶಾಲೆಗಳಿಗೆ, ಸುಳ್ಯ ತಾಲೂಕಿನ ಅಟ್ಲೂರು , ಇತರೆ ಶಾಲೆಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.










