ಮತ್ತೆ ಮರಳಿ ಬಂದ ಆನೆಗಳ ಹಿಂಡು

0

ಕಾಯರ್ತೋಡಿಯಲ್ಲಿ ಆನೆ ದಾಳಿ ನಡೆಸಿ ಕೃಷಿ ಹಾನಿ

ಆನೆಗಳ ಹಿಂಡು ಮರಳಿ ಕಾಯರ್ತೋಡಿ ಬೈಲಿಗೆ ಬಂದು ದಾಳಿ ನಡೆಸಿದ್ದು, ಕೃಷಿ ಹಾನಿ ಮಾಡಿದೆ.


ಸುಮಾರು ಒಂದು ತಿಂಗಳು ಕಾಯರ್ತೋಡಿ ಬೈಲ್‌ನಲ್ಲಿ ಬೀಡು ಬಿಟ್ಟು ಕೃಷಿ ನಾಶ ಮಾಡಿ ಪೆರಾಜೆ ಪರಿವಾರಕಾನ ಕಡೆ ಹೋದ ಆನೆಗಳ ಹಿಂಡು ನಿನ್ನೆ ರಾತ್ರಿ ವಾಪಾಸ್ ಕಾಯರ್ತೋಡಿ ಗಣೇಶ್ ಆಚಾರ್ಯ, ನಾರಾಯಣ ಆಚಾರ್ಯ, ಡಿ.ಎಸ್. ಗರಿಶ್‌ರವರ ತೋಟಕ್ಕೆ ದಾಳಿ ನಡೆಸಿ ಮಾಡಿ ಬಾಳೆ, ಅಡಿಕೆ, ಜೀಗುಜ್ಜೆ ಮರವನ್ನು ಪುದಿಗೈದಿದೆ.