ಸುಳ್ಯದ ಶ್ರೀ ಗುರುರಾಘವೇಂದ್ರ ಮಠದಲ್ಲಿ ಶ್ರೀ ಗುರು ರಾಯರ 354ನೇ ಆರಾಧನಾ ಮಹೋತ್ಸವವು
ಅ. 11 ರಂದು ನಡೆಯಲಿರುವುದು.















ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಮಹಾಗಣಪತಿ ಹವನ, ಪವಮಾನ ಹೋಮ, ಪವಮಾನ ಅಭಿಷೇಕ, ಬ್ರಾಹ್ಮಣ ರಾಧನೆ, ಮಹಾಪೂಜೆ ಯಾಗಿ ಪ್ರಸಾದ ವಿತರಣೆಯಾಗಿ ಮದ್ಯಾಹ್ನ ಅನ್ನ ಸಂತರ್ಪಣೆ ಯಾಗಲಿರುವುದು.
ಬೆಳಗ್ಗೆ ಶ್ರೀ ಚೆನ್ನಕೇಶವ ಭಜನಾ ಸಂಘದ ಸದಸ್ಯರಿಂದ ಭಜನೆ ಹಾಗೂ ಹರಿಕಥಾ ಕಾಲಕ್ಷೇಪ ರಾಜೇಶ್ ರೈ ಮೇನಾಲ ಇವರಿಂದ ನಡೆಯಲಿದೆ.
ಸಂಜೆ ಗಂಟೆ 5.00 ರಿಂದ ಅಲೆಟ್ಟಿ ಸದಾಶಿವ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕರಾಯರ ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ, ಅಷ್ಟವಧಾ ನ ಸೇವೆಯಾಗಿ ರಾತ್ರಿ ಮಹಾಪೂಜೆ ನಡೆದು ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆ ಯಾಗಲಿರುವುದು ಎಂದು ಮಠದ ಟ್ರಸ್ಟ್ ಅಧ್ಯಕ್ಷ
ಶ್ರೀಕೃಷ್ಣ ಸೋಮಯಾಗಿ ಯವರು ತಿಳಿಸಿರುತ್ತಾರೆ.










