ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾಕೋಶ, ಹಾಗೂ ಎಚ್ ಆರ್ ಅಂಡ್ ಪ್ಲೇಸ್ಮೆಂಟ್ ಸೆಲ್ ಜಂಟಿ ಆಶ್ರಯದಲ್ಲಿ ಆ.4 ರಿಂದ ಆ.9 ರ ವರಗೆ Employability Excellence :Career Ace ತರಬೇತಿ ಕಾರ್ಯಕ್ರಮ ನಡೆಯಲಿದ್ದು ಅದರ ಉದ್ಘಾಟನಾ ಸಮಾರಂಭ ಆ.4 ರಂದು ನಡೆಯಿತು.
















ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ,ಪ್ಲೇಸ್ಮೆಂಟ್ ಆಫೀಸರ್, ರಿಲಯನ್ಸ್ ಫೌಂಡೇಶನ್ ಬೆಂಗಳೂರು ಇದರ ಪ್ರೀತಮ್ ಪ್ರಸಾದ್, ಕಾರ್ಪೊರೇಟ್ ಟ್ರೈನರ್, ರಿಲಯನ್ಸ್ ಫೌಂಡೇಶನ್ ಬೆಂಗಳೂರು ಅಜಯ್ ಕುಮಾರ್ ಎ. ಜೆ. ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕರಾದ ಲತಾ ಬಿ.ಟಿ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಎಚ್ ಆರ್ ಹಾಗೂ ಪ್ಲೇಸ್ಮೆಂಟ್ ಸೆಲ್ ಸಂಯೋಜಕರಾದ ಶ್ರೀಮತಿ ಆರತಿ ಸ್ವಾಗತಿಸಿ , ವಿದ್ಯಾರ್ಥಿನಿ ಕೃತಿ ಧನ್ಯವಾದ ಸಮರ್ಪಿಸಿ, ನಿಶಾ ಗೌರಿ ಕಾರ್ಯಕ್ರಮ ನಿರೂಪಣೆ ನಿರೂಪಿಸಿದರು. ಮಹಾವಿದ್ಯಾಲಯದ ಅಂತಿಮ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಈ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಕಾಲೇಜಿನ ಎಚ್ ಆರ್ ಹಾಗೂ ಪ್ಲೇಸ್ಮೆಂಟ್ ಸೆಲ್ ವತಿಯಿಂದ, ಮ್ಯಾಜಿಕ್ ಬಸ್ ಇಂಡಿಯ ಫೌಂಡೇಶನ್ ಹಾಗೂ ರಿಲಯನ್ಸ್ ಫೌಂಡೇಶನ್ ಇವರ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.










