ಏನೆಕಲ್ಲು ಪ್ರೌಢ ಶಾಲೆಯಲ್ಲಿ ಮಾಹಿತಿ ಕಾರ್ಯಗಾರ

0

ರೈತ ಯುವಕ ಮಂಡಲ ಏನೆಕಲ್ಲು ಇದರ ವತಿಯಿಂದ, ಸುಬ್ರಹ್ಮಣ್ಯ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ
ಏನೆಕಲ್ಲು ಪ್ರೌಢ ಶಾಲೆಯಲ್ಲಿ, ಆ.9 ರಂದು ಮಾಹಿತಿ ಕಾರ್ಯಗಾರ ನಡೆಯಿತು.

ಈ ಕಾರ್ಯಾಗಾರಗಳಲ್ಲಿ ಮಾದಕ ವಸ್ತುಗಳ ದುರುಪಯೋಗ, ಸೈಬರ್ ಅಪರಾಧಗಳ ಅಪಾಯಗಳು ಮತ್ತು ಅವುಗಳನ್ನು ತಡೆಗಟ್ಟುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಇಲಾಖೆಯ ಸಹಾಯಕ ಉಪನಿರೀಕ್ಷಕರಾದ ಧನೇಶ್ ಎ, ಬೀಟ್ ಪೊಲೀಸ್ ಕಮಲ ಜಾಗೃತಿ ಮೂಡಿಸಿದರು.


ಸಭಾಧ್ಯಕ್ಷತೆಯನ್ನು ರೈತ ಯುವಕ ಮಂಡಲ ಏನೆಕಲ್ಲು ಇದರ ಅಧ್ಯಕ್ಷರಾದ ಜೀವಿತ್ ಪರಮಲೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಖ್ಯೋಪಾಧ್ಯಾಯರಾದ ರಮೇಶ್, ಸಹಶಿಕ್ಷಕಿ ಅನ್ನಪೂರ್ಣ ಭಟ್, ಪ್ರಶಾಂತ್ ದೋಣಿಮನೆ, ಉಪಸ್ತಿತರಿದ್ದರು.
ಜೀವಿತ್ ಪರಮಲೆ ಪ್ರಾಸ್ತಾವಿಕದ ಜೊತೆಗೆ ಸ್ವಾಗತಿಸಿದರು, ರೈತ ಯುವಕ ಮಂಡಲದ ಕಾರ್ಯದರ್ಶಿ ಅಶೋಕ ಕುಮಾರ್ ಅಂಬೆಕಲ್ಲು ಕಾರ್ಯಕ್ರಮದ ನಿರೂಪಿಸಿ ವಂದಿಸಿದರು.