ಸಂಪಾಜೆ ಅರಣ್ಯ ಇಲಾಖೆ ಎದುರು ಬಿಜೆಪಿ ಪ್ರತಿಭಟನೆ : ಕೆ.ಜಿ. ಬೋಪಯ್ಯ ನೇತೃತ್ವ

ಕಳೆದ ವಾರ ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಕೃಷಿಕರೊಬ್ಬರನ್ನು ಕಾಡಾನೆ ಮೆಟ್ಟಿ ಕೊಂದಿದೆ. ಆದ್ದರಿಂದ ಆನೆಗಳನ್ನು ಹಿಡಿದು ಸಾಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ವತಿಯಿಂದ ಸಂಪಾಜೆ ಅರಣ್ಯ ಇಲಾಖೆ ಎದುರು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
















ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಬಿಜೆಪಿ ನಾಯಕರಾದ ಸುಬ್ರಮಣ್ಯ ಉಪಾಧ್ಯಾಯ, ನಾಗೇಶ್ ಕುಂದಲ್ಪಾಡಿ, ಎನ್ ಸಿ ಅನಂತ , ರಮಾದೇವಿ ಕಳಗಿ, ಚೆಂಬು, ಪೆರಾಜೆ, ಕೊಡಗು ಸಂಪಾಜೆ, ಪಂಚಾಯತ್ ಅಧ್ಯಕ್ಷರು, ಸದಸ್ಯರು ಸೊಸೈಟಿ ನಿರ್ದೇಸಕರು, ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.











