ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಸದಸ್ಯರ ಕುಟುಂಬ ಸಮ್ಮಿಲನ ಮತ್ತು ಆಟಿದ ಕೂಟ

0

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಸದಸ್ಯರ ಕುಟುಂಬ ಸಮ್ಮಿಲನ, ಆಟಿದ ಕೂಟ, ರಕ್ಷಾ ಬಂಧನ ಮತ್ತು ಉಚಿತ ಆರೋಗ್ಯ ತಪಾಸಣೆ ವಿಶೇಷ ಕಾರ್ಯಕ್ರಮ ಆ. 10ರಂದು ಸಂಜೆ ಪೆರುವಾಜೆಯ ಜೆ.ಡಿ ಅಡಿಟೋರಿಯಂ ಬೆಳ್ಳಾರೆಯಲ್ಲಿ ನಡೆಯಿತು. ಆರಂಭದಲ್ಲಿ ಕ್ಲಬ್‌ನ ಸದಸ್ಯ ಹೊನ್ನಪ್ಪ ಬೆಳ್ಳಾರೆಯವರ ನೇತೃತ್ವದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.

ಬಳಿಕ ಪುರುಷರಿಗೆ, ಮಹಿಳೆಯರಿಗೆ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆದು, ವಿಜೆತರಿಗೆ ಪ್ರಥಮ ದ್ವಿತೀಯ ಬಹುಮಾನ ವಿತರಿಸಲಾಯಿತು. ಕ್ಲಬ್‌ನ ಸದಸ್ಯ ಡಾ. ಶಿವಪ್ರಸಾದ್ ಶೆಟ್ಟಿಯವರು ಉಚಿತ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ ನಡೆಸಿಕೊಟ್ಟರು.

ಬಳಿಕ ಆಟಿದ ಕೂಟದ ಕಾರ್ಯಕ್ರಮದಲ್ಲಿ ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿದ ಆಟಿ ತಿಂಗಳ ತಿನಿಸುಗಳನ್ನು ಸವಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಸದಸ್ಯರು ಹಾಗೂ ಅವರ ಕುಟುಂಬಸ್ಥರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟಿರುತ್ತಾರೆ.