ಮರ್ಕಂಜ ಪ್ರೌಢ ಶಾಲೆಯಲ್ಲಿ ಶ್ರಮದಾನ

0

ಸರಕಾರಿ ಪ್ರೌಢಶಾಲೆ ಮರ್ಕಂಜದಲ್ಲಿ ಪಂಚಶ್ರೀ ಸಂಜೀವಿನಿ ಒಕ್ಕೂಟದ ವತಿಯಿಂದ ಶ್ರಮಸೇವೆಯು ಆ.14ರಂದು ನಡೆಯಿತು.

ಶ್ರಮದಾನದಲ್ಲಿ ಒಕ್ಕೂಟದ ಅಧ್ಯಕ್ಷರು, ಸದಸ್ಯರು, ಎಂ ಬಿ ಕೆ, ಎಲ್ ಸಿ ಆರ್ ಪಿ ಯವರು, ಕೃಷಿ ಸಖಿ, ಪಶು ಸಖಿ ಭಾಗವಹಿಸಿ ಶಾಲಾ ಆವರಣದ ಮುಂಭಾಗದಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿ ತರಕಾರಿ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಶಾಲಾ ಮುಖ್ಯ ಶಿಕ್ಷಕರು, ಶ್ರಮ ಸೇವಕರನ್ನು ಅಭಿನಂದಿಸಿದರು. ಸಹ ಶಿಕ್ಷಕರು, ಅಡುಗೆ ಸಿಬ್ಬಂದಿಗಳು ಸಹಕರಿಸಿದರು.