














ಮಂಗಳೂರು ವಿಶ್ವವಿದ್ಯಾಲಯದ ಪದವಿ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದ್ದು ನೆಹರು ಮೆಮೋರಿಯಲ್ ಕಾಲೇಜಿನ ಅಂತಿಮ ಕಲಾವಿಭಾಗ ಶೇಕಡ 100 ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದು, ವಿಶೇಷ ಸಾಧನೆಯಾಗಿದೆ.
ಅಂತಿಮ ಕಲಾಪದವಿಯ ಕು. ಗಾನ ಬಿ.ಡಿ ಶೇಕಡ 92.76% ಅಂಕಗಳೊಂದಿಗೆ ಪ್ರಥಮ ಸ್ಥಾನ, 91.38% ಅಂಕಗಳೊಂದಿಗೆ ವರ್ಷಿಣಿ ದ್ವಿತೀಯ ಸ್ಥಾನವನ್ನು, ಶೇಕಡ 88% ಅಂಕಗಳೊಂದಿಗೆ ಕು. ಪ್ರಾಪ್ತಿ ಕೆ.ಸಿ ಮತ್ತು ಚೇತನ್ ಕೆ ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಮತ್ತು ಉಪನ್ಯಾಸಕ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.










