ಸುಳ್ಯದ ಖ್ಯಾತ ವಕೀಲರಾದ ಎ.ಸಿ.ನಂದನ್ ರವರು ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.















ಕೆಲಸಮಯದಿಂದ ಅನಾರೋಗ್ಯದಿಂದಿದ್ದ ಅವರು ಮೂರು ತಿಂಗಳಿನಿಂದ ತೀರಾ ಅಸ್ವಸ್ಥರಾಗಿದ್ದರು. ಅವರ ಬಂಧುಗಳು ಸುಳ್ಯದ ಮನೆಗೆ ಬರಲಾರಂಭಿಸಿದ್ದಾರೆ. ಅಪರಾಹ್ನ ಅವರ ಕಲ್ಲಪಳ್ಳಿಯ ಮನೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿರುವುದಾಗಿ ತಿಳಿದುಬಂದಿದೆ.
ಪತ್ನಿ ಡಾ.ರೇವತಿ ನಂದನ್, ಪುತ್ರಿಯರಾದ ಡಾ.ತಾರಾ ರೋಶನ್ ಮತ್ತು ಶ್ರೀಮತಿ ದೀಪಾ ರಮೇಶ್, ಅಳಿಯಂದಿರು, ಮೊಮ್ಮಕ್ಕಳನ್ನು ಅವರು ಅಗಲಿದ್ದಾರೆ.










