ದುಗ್ಗಲಡ್ಕ : ಮಿತ್ರ ಯುವಕ ಮಂಡಲ ಮತ್ತು ಕುರಲ್ ತುಳುಕೂಟದ ವತಿಯಿಂದ ಸ್ವಾತಂತ್ರ್ಯೋತ್ಸವ

0

ದುಗ್ಗಲಡ್ಕದಲ್ಲಿ ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ವತಿಯಿಂದ 78 ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಯುವಕ ಮಂಡಲದ ಕಟ್ಟಡದ ಬಳಿ ನಡೆಯಿತು.
ಯುವಕ ಮಂಡಲದ ಮಾಜಿ ಅಧ್ಯಕ್ಷ ಧನಂಜಯ ಕಲ್ಮಡ್ಕ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ, ಅಧ್ಯಕ್ಷ ರಮೇಶ್ ನೀರಬಿದಿರೆ, ಕಾರ್ಯದರ್ಶಿ ಭಾಗೀಶ್ ಕೆ.ಟಿ., ಯುವಕ ಮಂಡಲದ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ ಮೊದಲಾದವರು ಉಪಸ್ಥಿತರಿದ್ದರು. ಕುರಲ್ ತುಳುಕೂಟದ ಮಾಜಿ ಅಧ್ಯಕ್ಷ ಬಾಲಕೃಷ್ಣ ನಾಯರ್ ನೀರಬಿದಿರೆ, ಮಾಜಿ ನ.ಪಂ.ಅಧ್ಯಕ್ಷ ಶೀಲಾವತಿ ಮಾಧವ ಮಾತನಾಡಿದರು. ರಮೇಶ್‌ ನೀರಬಿದಿರೆ ಸ್ವಾಗತಿಸಿ, ಕೆ.ಟಿ.ಭಾಗೀಶ್ ವಂದಿಸಿದರು. ಮನೋಜ್ ಪಾನತ್ತಿಲ ಕಾರ್ಯಕ್ರಮ ನಿರೂಪಿಸಿದರು.