ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15 ರಂದು ಆಚರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಎ, ಉಪಾಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ, ಸದಸ್ಯರಾದ ಪ್ರಶಾಂತ್ ಪಾನತ್ತಿಲ, ಹರೀಶ್ ಉಬರಡ್ಕ, ಶ್ರೀಮತಿ ಭವಾನಿ ಮೂರ್ಜೆ, ಶ್ರೀಮತಿ ಮಮತಾ ಕುದ್ಪಾಜೆ, ಅನಿಲ್ ಬಳ್ಳಡ್ಕ, ವಸಂತಿ, ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಸಂಘದ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರು, ಊರವರು ಉಪಸ್ಥಿತರಿದ್ದರು.















ಸನ್ಮಾನ
ಬೆಳ್ಳಿಪ್ಪಾಡಿ ನಾರ್ಣಪ್ಪ ಗೌಡ ಇವರ ಸವಿನೆನಪಿಗಾಗಿ ಧ್ವಜಕಟ್ಟೆಯನ್ನು ಕೊಡುಗೆಯಾಗಿ ನೀಡಿದ ಬೆಳ್ಳಿಪ್ಪಾಡಿ ಗೋಪಾಲಕೃಷ್ಣ ದಂಪತಿಗಳನ್ನು ಸನ್ಮಾನಿಸಲಾಯಿತು.










