ಪಂಜ ಪ್ರಾ.ಕೃ. ಸಹಕಾರ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆ.15 ರಂದು ಸ್ವಾತಂತ್ರ್ಯೋತ್ಸವ ನಡೆಯಿತು.

ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಸಭಾಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಕಾರ್ಜ, ನಿರ್ದೇಶಕ ಸುಬ್ರಹ್ಮಣ್ಯ ಕುಳ, ಪೂರ್ವಾಧ್ಯಕ್ಷ ಗಣೇಶ್ ಪೈ ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಉಪಸ್ಥಿತರಿದ್ದರು .


ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಸ್ವಾಗತಿಸಿದರು. ಸಿಬ್ಬಂದಿ ದೀಪಕ್ ದೊಡ್ಡಮನೆ ಧ್ವಜಾರೋಹಣ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು. ಸಿಬ್ಬಂದಿ ಪೂವಪ್ಪ ಚಿದ್ಗಲ್ಲು ವಂದಿಸಿದರು. ಸಂಘದ ನಿರ್ದೇಶಕರು,
ಸಂಘದ ಸಿಬ್ಬಂದಿಗಳು, ಊರವರು ಉಪಸ್ಥಿತರಿದ್ದರು.