ಉಬರಡ್ಕ: ಹೊಳೆಯಲ್ಲಿದ್ದ ಮರಗಳ ತೆರವು

0

ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ಹೊಳೆಯ ಅಣೆಕಟ್ಟಿನಲ್ಲಿ ಸಿಕ್ಕಿಕೊಂಡಿದ್ದ ಮರದ ದಿಮ್ಮಿಗಳನ್ನು ಹಾಗೂ ಕಸದ ರಾಶಿಗಳನ್ನು ಗಂಗಾಧರ ನಾಯರ್ ಕಂಬಳಿಮೂಲೆ ಇವರ ನೇತೃತ್ವದಲ್ಲಿ ಆ.15 ರಂದು ತೆರವುಗೊಳಿಸಲಾಯಿತು.


ಈ ಸಂದರ್ಭದಲ್ಲಿ ತೇಜಕುಮಾರ್ ನೆಕ್ಕಿಲ, ಬಾಲಪ್ರಕಾಶ್ ಶೆಟ್ಟಿಹಿತ್ಲು, ದಯಾನಂದ ಅಮೈ, ಸಂದೀಪ್ ಶೆಟ್ಟಿ ಉಬರಡ್ಕ, ಲೊಕೇಶ್ ಪಟ್ರಕೋಡಿ, ಗಂಗಾಧರ ಭರ್ಜರಿಗುಂಡಿ, ವಿನೋದ್ ಮಾಯಿಲಮೂಲೆ, ವಿಜಯಕುಮಾರ್ ಬಡ್ಡೆಕಲ್ಲು, ಮೊದಲಾದವರು ಉಪಸ್ಥಿತರಿದ್ದರು.