ಬೆಳ್ಳಾರೆ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ತ್ಯೋತ್ಸವ ಆಚರಣೆ

0

ಬೆಳ್ಳಾರೆಯ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆಯಲ್ಲಿ ಆ.15 ರಂದು ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು.
ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್.ರೈ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.


ಸುಳ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು, ಅಮರ ಸುಳ್ಯ ಸಮರ ಸಮಿತಿ ಅಧ್ಯಕ್ಷ ಚಂದ್ರಕೋಲ್ಚಾರ್,ಅನಿಂದಿತ್ ಕೊಚ್ವಿ ಯವರು ಬಂಗ್ಲೆಗುಡ್ಡೆ ಐತಿಹಾಸಿಕ ಸ್ಥಳದ ಮಹತ್ವದ ಬಗ್ಗೆ ಮಾತನಾಡಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವೀಣಾ ಮೂಡಾಯಿತೋಟ, ಗ್ರಾಮ ಪಂಚಾಯತ್ ಸದಸ್ಯರು,ಸಹಕಾರಿ ಸಂಘದ ನಿರ್ದೇಶಕರು,ಬೆಳ್ಳಾರೆ ಕೆ.ಪಿ.ಎಸ್.ಪ್ರಾಂಶುಪಾಲ ಜನಾರ್ಧನ ಕೆ.ಎಸ್,ಉಪಪ್ರಾಂಶುಪಾಲೆ ಉಮಾ ಕುಮಾರಿ, ಕೂಸಪ್ಪ ಗೌಡ ಮುಗುಪ್ಪು,ರೊ.ರವೀಂದ್ರ ಗೌಡ ಮರಕಡ, ಸಾಹಿತಿ ಎ.ಕೆ.ಹಿಮಕರ,ವಿದ್ಯಾಧರ ಬಡ್ಡಡ್ಕ, ಸುಧಾಕರ ಕೊಚ್ಚಿ, ಗ್ರಾಮ ಪಂಚಾಯತ್ ಪಿ.ಡಿ.ಒ ಪ್ರವೀಣ್ ಕುಮಾರ್, ತೇಜ ಕುಮಾರ್ ಬಡ್ಡಡ್ಕ, ಸಂಜಯ್ ನೆಟ್ಟಾರು, ಶೈಲೇಶ್ ನೆಟ್ಟಾರು,ವಸಂತ ಉಲ್ಕಾಸ್ , ಪ್ರೇಮಚಂದ್ರ ಬೆಳ್ಳಾರೆ, ರೊ.ಬಾಲಕೃಷ್ಣ ಮಡ್ತಿಲ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಕೆ.ಪಿ.ಎಸ್.ಶಿಕ್ಷಣ
ಸಂಸ್ಥೆಯ ವಿದ್ಯಾರ್ಥಿಗಳು,ಅಂಗನವಾಡಿ ಕಾರ್ಯಕರ್ತೆಯರು,ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಗ್ರಾ.ಪಂ.ಸದಸ್ಯ ಚಂದ್ರಶೇಖರ ಪನ್ನೆ ಪ್ರಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿ,ವಂದಿಸಿದರು.