ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಹಕಾರ ಮಾರ್ಟ್ ಗೆ ಚಾಲನೆ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
ಸಂಘದಲ್ಲಿ ಸಹಕಾರ ಮಾರ್ಟ್ ಯೋಜನೆಗೆ ಆ.15 ರಂದು ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ರವರು ಚಾಲನೆ ನೀಡಿದರು.

ಆನ್‌ಲೈನ್ ಖರೀದಿಯ ಸುಲಭ ಮಾರ್ಗ ನಮ್ಮ ಸಂಸ್ಥೆಯಲ್ಲಿ ಆನ್‌ಲೈನ್ ಖರೀದಿ ಮತ್ತು ಮಾರಾಟದ ಅವಕಾಶ. ನಮ್ಮ ಸಂಸ್ಥೆಯ ಮುಖಾಂತರ ಸದಸ್ಯರಿಗೆ ಮತ್ತು ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ನಾವು ಸಹಕಾರ ಮಾರ್ಟ್ ಎಂಬ ಆನ್‌ಲೈನ್ ಅಂಗಡಿಯನ್ನು ಪ್ರಾರಂಭಿಸಿದ್ದೇವೆ. ಇದರ ಮೂಲಕ ನಮ್ಮ ಅಂಗಡಿಯ ಉತ್ಪನ್ನಗಳು ಮೊಬೈಲ್ ಅಥವಾ ಕಂಪ್ಯೂಟರ್ ನಿಂದ ಸುಲಭವಾಗಿ ಖರೀದಿಸ ಬಹುದು.

ತಂತ್ರಜ್ಞಾನದಿಂದ ಪ್ರಭಾವಿತನಾದ ಜನ ದೈನಂದಿನ ಜೀವನ ಶೈಲಿಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಆದರೆ ಸಣ್ಣ ಹಾಗೂ ಗ್ರಾಮೀಣ ವ್ಯಾಪಾರಿಗಳಿಗೆ ಈ ಡಿಜಿಟಲ್ ಪ್ಲಾಟ್ ಫಾರ್ಮ್ ಗಳು ದುಸ್ತರವಾಗಿವೆ. ದೊಡ್ಡ ಕಂಪನಿಗಳನ್ನೇ ಆದರಿಸ ಬೇಕಾಗಿದೆ. ಸಹಕಾರ ಮಾರ್ಟ್ ಈ ಸಮಸ್ಯೆಗೆ ಪರಿಹಾರವಾಗಿ ಸಹಕಾರಿ ಅಂಗಡಿಗಳಿಗೆ ONDC ಮೂಲಕ ಆನ್‌ಲೈನ್ ಮಾರಾಟದ ಅವಕಾಶ ಒದಗಿಸುತ್ತಿದೆ.


ನಮ್ಮ ಅಂಗಡಿಯ ಉತ್ಪನ್ನಗಳನ್ನು ಜನರು ಆನ್ ಲೈನ್ ನಲ್ಲಿ ನೋಡಬಹುದಾಗಿದೆ ಮತ್ತು ಖರೀದಿಸಬಹುದಾಗಿದೆ.

ಆರ್ಡರ್ ಮಾಡಿದ ಉತ್ಪನ್ನಗಳನ್ನು ಸಹಕಾರಿ ಅಂಗಡಿಯಿಂದ ಡೆಲಿವರಿ ಪಡೆದುಕೊಳ್ಳಬಹುದು
ಎಂದು ಅವರು ಹೇಳಿದರು.


ಸಂಘದ ಉಪಾಧ್ಯಕ್ಷ ಸದಾನಂದ ಕಾರ್ಜ, ನಿರ್ದೇಶಕರಾದ ಸುಬ್ರಹ್ಮಣ್ಯ ಕುಳ,ವಾಚಣ್ಣ ಕೆರೆಮೂಲೆ, ಅರುಣ್ ರೈ ಗೆಜ್ಜೆ, ಲಿಗೋಧರ ಆಚಾರ್ಯ,ವಾಸುದೇವ ಕೆರೆಕ್ಕೋಡಿ, ತಿಮ್ಮಪ್ಪ ಗೌಡ ಕೂತ್ಕುಂಜ, ಮುದರ ಐವತ್ತೊಕ್ಲು, ಬೇಬಿ ಕಟ್ಟ, ವನಿತಾ ಅತ್ಯಡ್ಕ , ಸಂಘದ ಪೂರ್ವಾಧ್ಯಕ್ಷ ಗಣೇಶ್ ಪೈ,ಮಾಜಿ ನಿರ್ದೇಶಕ ಲೋಕೇಶ್ ಬರೆಮೇಲು , ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ಪುರಿಯ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.