೭೯ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸ.ಕಿ.ಪ್ರಾ. ಶಾಲೆ ಕರಿಂಬಿಲದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ವಸಂತ ಕುಕ್ಕಯಕೋಡಿಯವರು ಧ್ವಜಾರೋಹಣೆ ಮಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಊರ ಗಣ್ಯರಾದ ಪದ್ಮನಾಭ ರೈ ಎಂಜೀರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.
















ಅತಿಥಿಗಳಾದ ಬಾಲಕೃಷ್ಣ ಹೇಮಳ ನಿವೃತ್ತ ಮುಖ್ಯ ಗುರುಗಳು, ಪೂವಪ್ಪ ಗೌಡ ಕೋಳ್ಪೆ ನಿವೃತ್ತ ಗುರುಗಳು, ಜಯಂತ ಕೆ ಸಿಆರ್ಪಿ ಎಣ್ಮೂರು ಮತ್ತು ಪಂಜ ಕ್ಲಸ್ಟರ್, ಪರಮೇಶ್ವರ ಮನೋಳಿತಾಯರು , ರಾಮಣ್ಣ ಜಾಲ್ತಾರ್ ಅಧ್ಯಕ್ಷರು ಗ್ರಾಮ ಪಂಚಾಯಿತ್ ಎಡಮಂಗಲ, ಶ್ರೀಮತಿ ರೇವತಿ ಎಂಜೀರು ಸದಸ್ಯರು ಗ್ರಾಮ ಪಂಚಾಯಿತ್ ಎಡಮಂಗಲ , ವೆಂಕಪ್ಪ ರೈ ಪೊಯ್ಯೆ ತ್ತೂರು ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳು, ಶ್ರೀಮತಿ ನಳಿನಿ ಲೆಕ್ಕೆಸಿರಿ ಮಜಲು ಉಪಾಧ್ಯಕ್ಷರು ಎಸ್ಡಿಎಂಸಿ ಉಪಸ್ಥಿತ ರಿದ್ದು ದಿನದ ವಿಶೇಷತೆ ಕುರಿತು ಮಾತಾನಾಡಿ ಶುಭ ಹಾರೈಸಿದರು. ಬಿ ಸ್ಮಾರ್ಟ್ ಎಂಟರ್ ಪ್ರೈಸಸ್ ನಿಂತಿಕಲ್ ಹಾಗೂ ಪೊಲೋ ಪ್ಲಸ್ ನಿಂತಿಕಲ್ ಇದರ ಮಾಲಿಕರಾದ ದೇವಿಪ್ರಸಾದ್ ಕೇರ್ಪಡ ಹಾಗೂ ಧ್ರುವಕುಮಾರ್ ಕೇರ್ಪಡ ರವರು ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು, ಊರ ವಿದ್ಯಾಭಿಮಾನಿಗಳು, ಎಸ್ಡಿಎಂಸಿ ಸದಸ್ಯರು , ಪೋಷಕ ವೃಂದವರು ಶಿಕ್ಷಕರು ಉಪಸ್ಥಿತರಿದ್ದು ಸಹಕರಿಸಿದರು.










