














ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅಜ್ಜಾವರ ಧ್ವಜಾರೋಹಣಗೈದರು. ಸಂಘದ ಗೌರವಾಧ್ಯಕ್ಷ ಜನಾರ್ಧನ ಬಿ. ಕುರುಂಜಿಭಾಗ್, ಮಾಜಿ ಅಧ್ಯಕ್ಷರುಗಳಾದ ಸೀತಾನಂದ ಬೇರ್ಪಡ್ಕ, ಡಾ. ರಂಗಯ್ಯ ಎಸ್, ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಗಿರಿಜಾ ಜನಾರ್ಧನ ಕೊಡಿಯಾಲಬೈಲು ಸೇರಿದಂತೆ ಮಹಿಳಾ ವೇದಿಕೆಯ ಪದಾಧಿಕಾರಿಗಳು, ಸದಸ್ಯರು, ಯುವ ವೇದಿಕೆಯ ಅಧ್ಯಕ್ಷ ಉದಯಕುಮಾರ್, ಸಂಘದ ಸದಸ್ಯರು, ಗಿರಿದರ್ಶಿನಿ ಸಭಾಭವನದ ಮೇಲ್ವಿಚಾರಕ ಪುನೀತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಧ್ವಜ ವಂದನೆ ಸಲ್ಲಿಸಿದರು.










