ಅಂಜಲಿ ಮೌಂಟೇಸರಿ ಶಾಲೆಯಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

0

ಅಂಜಲಿ ಮೌಂಟೇಸರಿ ಶಾಲೆಯಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ಗಂಗಾಧರ್ ಪಿ ಎಸ್ ರವರು ಭಾಗವಹಿಸಿ ಮಕ್ಕಳಿಗೆ ಸ್ವತಂತ್ರ ಹಬ್ಬದ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರಾದ ಶ್ರೀಯುತ ಶುಭಕರರವರು ವಹಿಸಿದರು. ಶಾಲೆಯ ಸಂಚಾಲಕರಾದ ಶ್ರೀಮತಿ ಗೀತಾಂಜಲಿ ಟಿ.ಜಿ. ಅವರು ಉಪಸ್ಥಿತರಿದ್ದರು. ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ಚಿಣ್ಣರು ಸ್ವತಂತ್ರ ಹೋರಾಟಗಾರರ ವೇಷಭೂಷಣದಲ್ಲಿ ಕಂಗೋ ಳಿಸಿದರು. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಶಾಲೆಯ ಸಂಚಾಲಕಿ ಗೀತಾಂಜಲಿ ಅವರು ಸ್ವಾಗತಿಸಿ ನಿರ್ಮಲ ವಂದಿಸಿದರು.. ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಶಿಕ್ಷಕಿ ಶ್ರೀಮತಿ ರೂಪ ಮಾಡಿದರು